
ಶಿರಡಿ ಸಾಯಿಬಾಬಾ ಅವರ ಸುತ್ತ ಅನೇಕ ಕತೆ-ಉಪಕತೆಗಳು ಇವೆ. ಇದರ ಜೊತೆ ವದಂತಿಗಳೂ ಸಾಕಷ್ಟು ಸೇರಿಕೊಂಡಿರುತ್ತವೆ. ಸಾಯಿಬಾಬಾ ಅವರ ಕಣ್ಣಿನಿಂದ ನೀರು ಬಂತು. ಸಾಯಿಬಾಬಾ ಮೂರ್ತಿ ಭಸ್ಮ ನೀಡಿ ಪವಾಡ ಮಾಡಿತು. ಇತ್ಯಾದಿಗಳು. ಅಂತೆಯೇ ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ನಿತ್ಯ ಹನುಮಾನ್ ಸ್ವರೂಪಿ ಕೋತಿಯೊಂದು ಬರುತ್ತದೆ. ನಿರ್ಭಯವಾಗಿ, ಯಾವುದೇ ಭಕ್ತರಿಗೆ ತೊಂದರೆ ನೀಡದೇ ದರ್ಶನ ಪಡೆಯುತ್ತದೆ ಎಂದು ವಾಟ್ಸಪ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಆಗ ಇದು ನಿಜವೇ.. ಎಂದು ಪರಿಶೀಲಿಸಲು ಮುಂದಾದಾಗ ನೈಜ ಸಂಗತಿ ತಿಳಿದುಬಂದಿದೆ. ೨೦೧೪ರ ಆಗಸ್ಟ್ ೨೫ರಂದು ಈ ಕರಿ ಕೋತಿ (ಲಂಗೂರ್ ಅಥವಾ ಮುಷ್ಯಾ ಎಂದು ಇದಕ್ಕೆ ಪರ್ಯಾಯ ಹೆಸರುಗಳಿವೆ) ಶಿರಡಿ ಸಾಯಿಬಾಬಾ ಮಂದಿರಕ್ಕೆ ಆಗಮಿಸಿತ್ತು. ನಿರ್ಭೀತಿಯಿಂದ ಮಂದಿರಕ್ಕೆ ‘ವಿವಿಐಪಿ’ಯಂತೆ ನೇರವಾಗಿ ನುಗ್ಗಿದ ಕೋತಿ, ಸಾಯಿಬಾಬಾ ಮೂರ್ತಿಯ ಮುಂದೆ ಕೆಲಹೊತ್ತು ಕುಳಿತಿತ್ತು. ಮಂದಿರದ ಪೂಜಾರಿಗಳು ನೀಡಿದ ಹಣ್ಣಿನ ಪ್ರಸಾದ ಪಡೆದು ಅಲ್ಲಿಂದ ಹೊರಟುಹೋಯಿತು. ಯಾವುದೇ ಭಕ್ತರಿಗೂ ಇದು ತೊಂದರೆ ಮಾಡಲಿಲ್ಲ.
ಈ ದೃಶ್ಯ ದೇವಸ್ಥಾನದ ಸಿಸಿಟೀವಿಯಲ್ಲಿ ದಾಖಲಾಗಿದ್ದು, ವೈರಲ್ ಆಗಿದೆ. ‘ಆದರೆ ಇದು 2014 ರ ಆ.25 ರಂದು ಮಾತ್ರ ನಡೆದ ಘಟನೆ. ಬಳಿಕ ಈ ಕೋತಿ ಮಂದಿರಕ್ಕೆ ಆಗಮಿಸಿಲ್ಲ. ಇದು ನಿತ್ಯದ ವಿದ್ಯಮಾನವಲ್ಲ’ ಎಂದು ದೇಗುಲದ ಆಡಳಿತ ಮಂಡಳಿಯವರು ಮತ್ತು ಭಕ್ತರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.