7 ತಿಂಗಳಿಗೆ ಹುಟ್ಟಿದವರಂತೆ ಮಾತಾಡ್ತಾರೆ; ಬಿಎಸ್ವೈಗೆ ಈಶ್ವರಪ್ಪ ಪರೋಕ್ಷ ಟಾಂಗ್

Published : Feb 11, 2017, 12:56 PM ISTUpdated : Apr 11, 2018, 01:11 PM IST
7 ತಿಂಗಳಿಗೆ ಹುಟ್ಟಿದವರಂತೆ ಮಾತಾಡ್ತಾರೆ; ಬಿಎಸ್ವೈಗೆ ಈಶ್ವರಪ್ಪ ಪರೋಕ್ಷ ಟಾಂಗ್

ಸಾರಾಂಶ

ಬೆಂಗಳೂರು (ಫೆ.11): ಬಿಜೆಪಿಯಲ್ಲಿ ಬ್ರಿಗೇಡ್ ಬಿಕ್ಕಟ್ಟು ನಿಲ್ಲುವಂತೆ ಕಾಣುತ್ತಿಲ್ಲ. ಬಿಎಸ್​​ವೈ ಮತ್ತು ಈಶ್ವರಪ್ಪ ಜಟಾಪಟಿ ಮುಂದುವರೆದಿದೆ. ಬ್ರಿಗೇಡ್ ತಾಕತ್ತು ತೋರಿಸುವೆ ಎಂದ ಈಶ್ವರಪ್ಪ ಗುಡುಗಿದ್ದಾರೆ.

ಬೆಂಗಳೂರು (ಫೆ.11): ಬಿಜೆಪಿಯಲ್ಲಿ ಬ್ರಿಗೇಡ್ ಬಿಕ್ಕಟ್ಟು ನಿಲ್ಲುವಂತೆ ಕಾಣುತ್ತಿಲ್ಲ. ಬಿಎಸ್​​ವೈ ಮತ್ತು ಈಶ್ವರಪ್ಪ ಜಟಾಪಟಿ ಮುಂದುವರೆದಿದೆ. ಬ್ರಿಗೇಡ್ ತಾಕತ್ತು ತೋರಿಸುವೆ ಎಂದ ಈಶ್ವರಪ್ಪ ಗುಡುಗಿದ್ದಾರೆ.

ಬ್ರಿಗೇಡ್ ಆರಂಭಿಸಿ ಏಳು ತಿಂಗಳಾಗಿದೆಯಷ್ಟೇ.  7 ತಿಂಗಳಿಗೆ ಹುಟ್ಟಿದವರಂತೆ ಮಾತಾಡ್ತಾರೆ ಎಂದು ಬಿಎಸ್​ವೈಗೆ ಈಶ್ವರಪ್ಪ ಪರೋಕ್ಷವಾಗಿ  ಟಾಂಗ್​ ನೀಡಿದ್ದಾರೆ.

ಬ್ರಿಗೇಡ್ ನ ತಾಕತ್ತೇನು ಎಂದು ತೋರಿಸೋಣ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಸಮಿತಿ ರಚನೆ ಆಗಬೇಕು. ಮಾರ್ಚ್ 4 ರಂದು ಮತ್ತೊಮ್ಮೆ ಸಭೆ ನಡೆಸೋಣ ಎಂದು ಬ್ರಿಗೇಡ್ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಬ್ರಿಗೇಡ್ ನಿರ್ಧಾರಗಳು

ಕೆ.ಎಸ್.ಈಶ್ವರಪ್ಪರಿಗೆ ಎಲ್ಲಾ ಹಂತದಲ್ಲಿ ಬೆಂಬಲಕ್ಕೆ ನಿಲ್ಲಲು ನಿರ್ಧಾರ

ಬಿಜೆಪಿಯ ಪದಾಧಿಕಾರಿಗಳ ಬದಲಾವಣೆ ಆಗುವ ತನಕ ಬ್ರಿಗೇಡ್ ಕಾರ್ಯಚಟುಟಿಕೆ ಜೀವಂತ

ವರಿಷ್ಟರು ಸೂಚಿಸಿದಂತೆ ಪದಾಧಿಕಾರಿಗಳ ಬದಲಾವಣೆಗೆ ಒತ್ತಾಯ ಮುಂದುವರೆಸಲು ತೀರ್ಮಾನ

ಸಾಮಾಜಿಕ ಚಟುವಟಿಕೆಗಳ ಮೂಲಕ ಬ್ರಿಗೇಡ್ ನ ಕ್ರಿಯಾಶೀಲತೆಯನ್ನು ಮುಂದುವರೆಸಲು ತೀರ್ಮಾನ

ಪ್ರತಿ ಜಿಲ್ಲೆಗಳಲ್ಲೂ ಸಮಿತಿ ರಚಿಸುವ ಮೂಲಕ ಪ್ರತ್ಯೇಕ ಅಸ್ತಿತ್ವವನ್ನು ಮುಂದುವರೆಸಿಕೊಂಡು ಹೋಗಲು ತೀರ್ಮಾನ

ವಿದ್ಯಾರ್ಥಿಗಳ ಸಮಾವೇಶ ಮಾಡುವುದರ ಮೂಲಕ  ಬ್ರಿಗೇಡ್ ಬಲ ಪ್ರದರ್ಶನಕ್ಕೆ ಸಭೆಯಲ್ಲಿ ಸಹಮತ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ
ಕುಂಟುನೆಪ ಹೇಳಂಗಿಲ್ಲ, ಈ ದೇಶಗಳ ನಾಗರಿಕರಿಗೆ ಮಿಲಿಟರಿ ಸೇವೆ ಕಡ್ಡಾಯ! ಭಾರತದಲ್ಲಿ ಇದು ಜಾರಿಯಾದ್ರೆ?