ರಾಜ್ಯದಲ್ಲಿ ವಿದ್ಯುತ್ ದರ ಇನ್ನಷ್ಟು ದುಬಾರಿ?

By Suvarna Web DeskFirst Published Dec 9, 2016, 9:45 AM IST
Highlights

ಬೆಂಗಳೂರಿನ ವಸತಿ ಪ್ರದೇಶಗಳಲ್ಲಿ ವಿದ್ಯುತ್ ದರ ಸದ್ಯ ಪ್ರತೀ ಯೂನಿಟ್’ಗೆ ಕನಿಷ್ಠ 3 ರೂಪಾಯಿ ಇದೆ. ಈಗ ಎಸ್ಕಾಂ ಬೇಡಿಕೆಯಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿದರೆ ಕನಿಷ್ಠ ದರ 4.40 ರೂಪಾಯಿಗೆ ಏರಲಿದೆ.

ಬೆಂಗಳೂರು(ಡಿ. 09): ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರತೀ ಯೂನಿಟ್’ಗೆ 1.40 ರೂಪಾಯಿ ಬೆಲೆ ಹೆಚ್ಚಳ ಮಾಡುವಂತೆ ರಾಜ್ಯದ ಐದೂ ಎಸ್ಕಾಂ ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್’ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಮತ್ತು ಮೆಸ್ಕಾಮಗಳು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ ಕೆಇಆರ್’ಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಹೊಸ ದರ ಪ್ರಕಟವಾಗುವ ಸಾಧ್ಯತೆ ಇದೆ. ಕಳೆದ ವರ್ಷ ಪ್ರತೀ ಯೂನಿಟ್’ಗೆ 30 ಪೈಸೆ ಬೆಲೆ ಹೆಚ್ಚಳವಾಗಿತ್ತು. ಆದರೆ, ಈ ಬಾರಿ ಎಸ್ಕಾಂ ಕಂಪನಿಗಳು ಭಾರೀ ಏರಿಕೆಗೆ ಬೇಡಿಕೆ ಮುಂದಿಟ್ಟಿರುವುದು ಗ್ರಾಹಕರಿಗೆ ಶಾಕ್ ಆಗುವಂತಿದೆ.

ಬೆಂಗಳೂರಿನ ವಸತಿ ಪ್ರದೇಶಗಳಲ್ಲಿ ವಿದ್ಯುತ್ ದರ ಸದ್ಯ ಪ್ರತೀ ಯೂನಿಟ್’ಗೆ ಕನಿಷ್ಠ 3 ರೂಪಾಯಿ ಇದೆ. ಈಗ ಎಸ್ಕಾಂ ಬೇಡಿಕೆಯಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿದರೆ ಕನಿಷ್ಠ ದರ 4.40 ರೂಪಾಯಿಗೆ ಏರಲಿದೆ. ಅಂದರೆ, ವಿದ್ಯುತ್ ದರ ಶೇ.46ರಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ.

click me!