ಇಪಿಎಫ್‌ ಪಿಂಚಣಿದಾರರ ಕನಿಷ್ಠ ಮಾಸಿಕ ಪಿಂಚಣಿ 2000 ರು.ಗೆ ಹೆಚ್ಚಳ?

First Published Jun 26, 2018, 1:24 PM IST
Highlights

ಕಾರ್ಮಿಕ ಭವಿಷ್ಯ ನಿಧಿ ಮಾಸಿಕ ಪಿಂಚಣಿಯನ್ನು 2000 ಕ್ಕೇರಿಸುವ  ಪ್ರಸ್ತಾಪವನ್ನು ಸರ್ಕಾರ ಮಾನ್ಯ ಮಾಡಿದರೆ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕ 3000 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. ಯೋಜನೆ ಜಾರಿಯಾದರೆ 40 ಲಕ್ಷ ಚಂದಾದಾರರಿಗೆ ಲಾಭವಾಗಲಿದೆ. 

ನವದೆಹಲಿ (ಜೂ. 26): ಕಾರ್ಮಿಕ ಭವಿಷ್ಯ ನಿಧಿ ಚಂದಾದಾರರು ಪಡೆಯುತ್ತಿರುವ ಮಾಸಿಕ ಪಿಂಚಣಿಯನ್ನು ಈಗಿರುವ ಕನಿಷ್ಠ 1000 ರು.ನಿಂದ 2000 ರು.ಗೆ ಏರಿಸುವ ಪ್ರಸ್ತಾಪವನ್ನು ಇಪಿಎಫ್‌ಒ ಮಂಡಳಿ ಮುಂದಿಟ್ಟಿದೆ.

ಬುಧವಾರ ನಡೆಯಲಿರುವ ಮಂಡಳಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಒಂದು ವೇಳೆ ಪ್ರಸ್ತಾಪವನ್ನು ಸರ್ಕಾರ ಮಾನ್ಯ ಮಾಡಿದರೆ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕ 3000 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. ಯೋಜನೆ ಜಾರಿಯಾದರೆ 40 ಲಕ್ಷ ಚಂದಾದಾರರಿಗೆ ಲಾಭವಾಗಲಿದೆ. ಇದೇ ವೇಳೆ ಮಂಡಳಿಯ ನಿಧಿಯನ್ನು ಇನ್ನಷ್ಟುಪ್ರಮಾಣದಲ್ಲಿ ಷೇರುಪೇಟೆಯಲ್ಲಿ ಹೂಡುವ ಕುರಿತೂ ಬುಧವಾರದ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.

click me!