ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆ ಸಹಾಯಕರ ಹುದ್ದೆಗಳಿಗೆ ನೇಮಕಾತಿ ಹಿನ್ನೆಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಪದವಿ, ಸ್ನಾತಕೋತ್ತರ ಪದವಿಯಿಂದ ಹಿಡಿದು ಐಟಿಐ, ಎಂಜಿನಿಯರಿಂಗ್ ಪದವೀಧರರೂ ಆಗಮಿಸಿದ್ದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದ ಈ ಹುದ್ದೆಗೆ ಬೆಳಗ್ಗೆ ಸರಿಯಾಗಿ 10 ಕ್ಕೆ ಪ್ರಾಯೋಗಿಕ ಪರೀಕ್ಷೆಯನ್ನು ಆರಂಭಿಸಲಾಯಿತು.
ಹಾಸನ (ಜು.05): ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆ ಸಹಾಯಕರ ಹುದ್ದೆಗಳಿಗೆ ನೇಮಕಾತಿ ಹಿನ್ನೆಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಪದವಿ, ಸ್ನಾತಕೋತ್ತರ ಪದವಿಯಿಂದ ಹಿಡಿದು ಐಟಿಐ, ಎಂಜಿನಿಯರಿಂಗ್ ಪದವೀಧರರೂ ಆಗಮಿಸಿದ್ದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದ ಈ ಹುದ್ದೆಗೆ ಬೆಳಗ್ಗೆ ಸರಿಯಾಗಿ 10 ಕ್ಕೆ ಪ್ರಾಯೋಗಿಕ ಪರೀಕ್ಷೆಯನ್ನು ಆರಂಭಿಸಲಾಯಿತು.
ಅಭ್ಯರ್ಥಿಗಳಿಗೆ ಲಾಟರಿ ಮೂಲಕ ಯಾವ ಅಡುಗೆಯನ್ನು ಮಾಡಬೇಕು ಎಂಬುದನ್ನು ಆಯ್ಕೆ ಮಾಡಲಾಯಿತು. ಅಡುಗೆ ಮಾಡಲು ಅರ್ಧ ತಾಸುಗಳ ಕಾಲ ಸಮಯಾವಕಾಶವನ್ನು ನೀಡಲಾಗಿತ್ತು. ಅನ್ನ ಸಾಂಬಾರ್, ಚಪಾತಿ, ರಾಗಿಮುದ್ದೆ, ಪಾಯಸ, ತರಕಾರಿ ಪಲ್ಯ, ಅಕ್ಕಿ ರೊಟ್ಟಿ, ಉಪ್ಪಿಟ್ಟು, ತಿಳಿ ಸಾಂಬಾರ್, ಪುಳಿಯೊಗರೆ, ಅವಲಕ್ಕಿ ಉಪ್ಪಿಟ್ಟು ಸಿದ್ಧಪಡಿಸಿದರು. ಅಡುಗೆಯನ್ನು ಸಿದ್ಧಪಡಿಸಿ ಕೆಲವರು ಸೈ ಎನಿಸಿಕೊಂಡರೇ, ಕೆಲವರು ಒಲೆಯನ್ನು ಹಚ್ಚುವುದಕ್ಕೂ ಕೆಲ ಕಾಲ ಪರದಾಡಿದಂತಹ ಘಟನೆಗಳು ನಡೆಯಿತು.
ಉತ್ತರ ಕರ್ನಾಟಕ ಮಂದಿಗೆ ರಾಗಿ ಮುದ್ದೆ ಮಾಡಲು ಲಾಟರಿಯಲ್ಲಿ ಬಂದಿತ್ತು. ಆದರೆ ರಾಗಿ ಮುದ್ದೆ ಮಾಡಲು ಬರದಂತಹ ಕೆಲವರು ಅದಕ್ಕೆ ಯಾವ ಪದಾರ್ಥವನ್ನು ಹಾಕಬೇಕು ಎಂಬುದು ತಿಳಿಯದೇ ಸ್ವಲ್ಪ ಕಾಲ ಗೊಂದಲಕ್ಕೆ ಸಿಲುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.