ಆನೆ ಸಿದ್ದನ ಆರೋಗ್ಯದಲ್ಲಿ ಸುಧಾರಣೆ, ಚೇತರಿಸಿಕೊಳ್ಳುವವರೆಗಿಲ್ಲ ಸ್ಥಳಾಂತರ

By web DeskFirst Published Oct 22, 2016, 11:26 AM IST
Highlights

"ಆನೆ ಸಿದ್ದನ ಆರೋಗ್ಯ ಸುಧಾರಣೆ ಆಗಿದೆ. ಆನೆ ಸ್ಥಳಾಂತರ ಮಾಡುವುದು ಬೇಡ ಎಂಬ ತಜ್ಞರ ಸಲಹೆ ನೀಡಿದ್ದಾರೆ. ಹಾಗಾಗಿ ಇದ್ದಲ್ಲಿಯೇ ಚಿಕಿತ್ಸೆ ಮುಂದುವರಿಕೆ ಮಾಡಲಾಗುವುದು. ಸಂಪೂರ್ಣ ಚೇತರಿಸಿಕೊಂಡ ಬಳಿಕ ಸ್ಥಳಾಂತರ ಮಾಡಲಾಗುತ್ತದೆ. ಸದ್ಯಕ್ಕೆ  ನಮ್ಮಲ್ಲಿ ಏರ್ ಲಿಫ್ಟ್ ವ್ಯವಸ್ಥೆ ಇಲ್ಲ " ಎಂದು ಅರಣ್ಯ ಸಚಿವ ರಮಾನಾಥ್ ರೈ ಸುದ್ಧಿಗೋಷ್ಟಿಯಲ್ಲಿ ತಿಳಿಸಿದ್ದಾರೆ.               

ಬೆಂಗಳೂರು(ಅ.21): ಬರೋಬ್ಬರಿ 52 ದಿನಗಳ ಕಾಲ ರಾಮನಗರದಲ್ಲಿ  ನರಕಯಾತನೆ ಅನುಭವಿಸಿದ್ದ ಕಾಡಾನೆಗೆ ಕೊನೆಗೂ ಚಿಕಿತ್ಸೆ  ಭಾಗ್ಯ ಸಿಕ್ಕಿದೆ.  ಮಾಗಡಿ ತಾಲ್ಲೂಕಿನ ಮಂಚನಬೆಲೆ ಹಿನ್ನೀರಿನ ಜಲಾಶಯದಲ್ಲಿ ಒಂಟಿ ಸಲಗವೊಂದು ಅಪಾಯಕ್ಕೆ ಸಿಲುಕಿತ್ತು. ಈವರೆಗೂ ಅರಣ್ಯ ಇಲಾಖೆ ನೆಪ ಮಾತ್ರಕ್ಕೆ  ನೋವು ನಿವಾರಕ ಮಾತ್ರೆಗಳನ್ನು ನೀಡುತ್ತಿತ್ತು.

ಕಾಡಾನೆಗೆ ಚಿಕಿತ್ಸೆ ನೀಡಲು ಅರಣ್ಯಾಧಿಕಾರಿಗಳು, ವೈದ್ಯರು ಭೇಟಿ ನೀಡಿದ್ದಾರೆ. ಶಕ್ತಿಯಿಲ್ಲದೇ ಕುಂಟುತ್ತಲೇ ಹೆಜ್ಜೆ ಹಾಕುತ್ತಾ ಇರುವ ಒಂಟಿಸಲಗಕ್ಕೆ ಆಹಾರ ನೀಡಲಾಗಿದೆ. ಜತೆಗೆ ವೈದ್ಯರ ತಂಡ ಚಿಕಿತ್ಸೆ ನೀಡಿದ್ದಾರೆ. ಆನೆಯ ಚಿಕಿತ್ಸೆಯ ಬಗ್ಗೆ ವೀಕ್ಷಣೆ ನಡೆಸಲು ಅಸ್ಸಾಂ ರಾಜ್ಯದ ಗುವಾಹಟಿಯ ಡಾ.ಕುಶಾಲ್​ ಶರ್ಮ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

click me!