ಜನ್ಮ ನೀಡುವುದನ್ನು ಫೋಟೊ ತೆಗೆಯಲು ಹೋದವ ಶವವಾದ

Published : Jun 04, 2017, 09:08 PM ISTUpdated : Apr 11, 2018, 12:56 PM IST
ಜನ್ಮ ನೀಡುವುದನ್ನು ಫೋಟೊ ತೆಗೆಯಲು ಹೋದವ ಶವವಾದ

ಸಾರಾಂಶ

ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಅರುಣ್'ನನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆತಂದಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಕಲೇಶಪುರ(ಜೂ.04): ರಸ್ತೆ ಬದಿಯಲ್ಲಿ ಕಾಡಾನೆ ಮರಿಗೆ ಜನ್ಮ ನೀಡಿರುವುದನ್ನು ನೋಡಿ, ಫೋಟೋ ತೆಗೆಯಲು ಮುಂದಾಗಿದ್ದ ವ್ಯಕ್ತಿಯನ್ನು ಕಾಡಾನೆ ಹಿಂಡು ದಾಳಿ ನಡೆಸಿ ಸಾಯಿಸಿದೆ.

ಈ ಘಟನೆ ನಡೆದಿರುವುದು ಹಾಸನ ಜಿಲ್ಲೆ ಸಕಲೇಶಪುರದ ಹೈದೂರಿನಲ್ಲಿ. ಹೈದೂರಿನ ಕಾಫಿ ಬೆಳೆಗಾರ ಅರುಣ್, ಕಾಡಾನೆ ದಾಳಿಗೆ ತುತ್ತಾದ ವ್ಯಕ್ತಿ. ಬಾಳ್ಳುಪೇಟೆ -ಕೊಡ್ಲಿಪೇಟೆ ಮುಖ್ಯ ರಸ್ತೆಯ  ಬದಿಯಲ್ಲಿ ಹೆಣ್ಣಾನೆ ಮರಿಯೊಂದಕ್ಕೆ ಜನ್ಮ ನೀಡಿತ್ತು. ಈ ಸುದ್ದಿ ತಿಳಿದು ನಿನ್ನೆ ರಾತ್ರಿ ಹೈದೂರು ಸುತ್ತಮುತ್ತಲ ಜನರು ಕಾಡಾನೆ ನೋಡಲು  ಮುಗಿಬಿದ್ದಿದ್ದರು. ಹಿಂಡಿನಲ್ಲಿ  20 ಕ್ಕೂ ಹೆಚ್ಚು ಕಾಡಾನೆಗಳಿದ್ದವು, ಜೀಪಿನಲ್ಲಿ ಕುಳಿತು ಅರುಣ್ ಫೋಟೋ ತೆಗೆಯಲು  ಮುಂದಾದ ವೇಳೆ ಕಾಡಾನೆ ದಾಳಿ ನಡೆಸಿ ಬಲಿ ತೆಗೆದುಕೊಂಡಿವೆ. ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಅರುಣ್'ನನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆತಂದಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ತಿರುಪತಿಗೆ ಒಂದೇ ದಿನ ದಾಖಲೆ 98058 ಭಕ್ತರ ಭೇಟಿ, ದೇವರ ದರ್ಶನ
Mekedatu project: ಮೇಕೆದಾಟು ಯೋಜನೆ, ಕರ್ನಾಟಕಕ್ಕೆ ಗೆಲುವು, ತಮಿಳುನಾಡು ಅರ್ಜಿ ವಜಾ, ಸುಪ್ರೀಂಗೆ ಧನ್ಯವಾದ ಹೇಳಿದ ಡಿಕೆಶಿ