ಕೇರಳದ ತ್ರಿಶ್ಯೂರ್ ದೇಗುಲದ ಉತ್ಸವದಲ್ಲಿ ಆನೆಯ ರೌದ್ರಾವತಾರ: ಯುವಕನ ಎತ್ತಿ ಎಸೆದ ಆನೆ

Published : Feb 26, 2026, 05:34 PM IST
elephant attack on kerala temple festival

ಸಾರಾಂಶ

ಕೇರಳದ ತ್ರಿಶೂರ್‌ನ ಅನ್ನಮನದ ಮಹದೇವ ದೇಗುಲದ ಜಾತ್ರೆಯಲ್ಲಿ ಆನೆಯೊಂದು 26 ವರ್ಷದ ಯುವಕನ ಮೇಲೆ ದಾಳಿ ಮಾಡಿದೆ. ಶೀವೇಲಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದಾಗ ಅಕ್ಕಿಕಾವು ಕಾರ್ತಿಕೇಯನ್ ಎಂಬ ಆನೆ ಯುವಕನನ್ನು ಎತ್ತಿ ಎಸೆದಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

ತ್ರಿಶ್ಯೂರ್ ಜಾತ್ರೆಯಲ್ಲಿ ಆನೆಯ ರೌದ್ರವತಾರ:

ತ್ರಿಶ್ಯೂರ್: ಕೇರಳದ ದೇಗುಲಗಳಲ್ಲಿ ಹಾಗೂ ಜಾತ್ರೆಗಳಲ್ಲಿ ಆನೆಯನ್ನು ಬಳಸುವುದು ಸಾಮಾನ್ಯವಾಗಿದೆ. ದೇವರ ಮೆರವಣಿಗೆಗೆ ಹಾಗೂ ಜಾತ್ರೆಯ ಉತ್ಸವಕ್ಕ ಆನೆಯನ್ನು ಕಡ್ಡಾಯವಾಗಿ ದಕ್ಷಿಣ ಭಾರತದ ಬಹುತೇಕ ದೇವಾಲಯಗಳಲ್ಲಿ ಬಳಸಲಾಗುತ್ತದೆ. ಅದೇ ರೀತಿ ಕೇರಳದ ತ್ರಿಶೂರ್‌ನ ಅನ್ನಮನದ ಮಹದೇವ ಎಂಬ ದೇಗುಲದ ಜಾತ್ರೆಯ ಉತ್ಸವದಲ್ಲಿ ಆನೆಯೊಂದು 26 ವರ್ಷದ ಯುವಕನನ್ನು ಎತ್ತಿ ಎಸೆದಿದೆ. ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.

 ದೇಗುಲದ ವಲಿಯವಿಳಕ್ಕು ಹಬ್ಬದ ಸಂದರ್ಭದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಶೀವೇಲಿ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿದ್ದಾಗ ಈ. ಘಟನೆ ನಡೆದಿದೆ. ಆನೆ ದಾಳಿಗೊಳಗಾದ ಯುವಕನನ್ನು ಮಾಂಬ್ರಾದ ಎರಯಂಕುಡಿ ಮೂಲದ ಮತ್ತು ತುರನೆಲ್ಲೂರ್ ಮಾನಾ ನಿವಾಸಿ ವಿವೇಕ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸೊಬಗರಂತೆ ಬಂದು 10,000 ಮೌಲ್ಯದ ಒಳ ಉಡುಪು ಕದ್ದೊಯ್ದ ಮೂವರು ಮಹಿಳೆಯರು: ಸಿಸಿಟಿವಿ ದೃಶ್ಯ ವೈರಲ್

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಲಂಕಾರಿಕ ಆಭರಣಗಳನ್ನು ಹಸ್ತಾಂತರಿಸುವಾಗ ಅಕ್ಕಿಕಾವು ಕಾರ್ತಿಕೇಯನ್ ಎಂಬ ಆನೆ ಉದ್ರೇಕಗೊಂಡು ಇದ್ದಕ್ಕಿದ್ದಂತೆ ತನ್ನ ಸೊಂಡಿಲಿನಿಂದ ಯುವಕ ವಿವೇಕ್‌ನನ್ನು ಎತ್ತಿ ಎಸೆದಿದೆ. ಘಟನೆಯಲ್ಲಿ ವಿವೇಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಅಂಗಮಾಲಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಪೆರುವನಂ ಕುಟ್ಟನ್ ಮಾರಾರ್ ನೇತೃತ್ವದ ಪಂಚರಿ ಮೇಳ ಆರಂಭವಾಗುವ ಮುನ್ನ ಈ ಘಟನೆ ನಡೆದಿದೆ. ಅಪಘಾತದ ನಂತರ, ದೇವಾಲಯದಲ್ಲಿ ಉತ್ಸವದ ಆಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಈ ಅನೆಯನ್ನು ದೇವಾಲಯದ ಆವರಣದಲ್ಲಿಯೇ ನಿಯಂತ್ರಿಸಲಾಗಿದ್ದು, ಮಾಹಿತಿ ಪಡೆದ ಮಾಲಾ ಪೊಲೀಸರು ಸ್ಥಳಕ್ಕೆ ತಲುಪಿ ಭದ್ರತಾ ಕ್ರಮಗಳನ್ನು ಕೈಗೊಂಡರು. ಆನೆ ದಳವೂ ಆಗಮಿಸಿ, ಆನೆಯನ್ನು ದೇವಾಲಯದ ಆವರಣದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಕ್ರಮಗಳನ್ನು ಪ್ರಾರಂಭಿಸಿತು. ಇಂದು ಗುರುವಾರ ವಲಿಯವಿಳಕ್ಕು ಹಬ್ಬದ ಪ್ರಮುಖ ದಿನವಾಗಿದ್ದರಿಂದ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: 

ಮಹಿಳೆಯರ ಕಲಾಕೃತಿಯೂ ಸುರಕ್ಷಿತ ಅಲ್ಲ: ಬಾಲಕ ಮಾಡಿದ್ದೇನು? : ವೀಡಿಯೋ ವೈರಲ್

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Internal Reservation Row: ಸಿಎಂ ನೇತೃತ್ವದಲ್ಲಿ ದಲಿತ ಸಚಿವರ ಮಹತ್ವದ ಸಭೆ, ಮೂರು ಮಹತ್ವದ ನಿರ್ಧಾರ, ರಾಜಭವನಕ್ಕೆ ಸಚಿವರ ನಿಯೋಗ ದೌಡು!
ಬೆಂಗಳೂರು: ಡ್ರಿಪ್ಸ್ ತೆಗೆಯುವಾಗ ದಾದಿಯಿಂದ 6 ತಿಂಗಳ ಮಗುವಿನ ಬೆರಳು ಕಟ್‌! ಆಸ್ಪತ್ರೆಯಲ್ಲಿ ಕಂದನ ಚೀತ್ಕಾರ!