10ನೇ ಕ್ಲಾಸ್ ಪರೀಕ್ಷೆ ನಡುವೆ ವಾಶ್‌ರೂಂಗೆ ತೆರಳಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

Published : Feb 26, 2026, 04:52 PM IST
Girl student gives birth

ಸಾರಾಂಶ

10ನೇ ಕ್ಲಾಸ್ ಪರೀಕ್ಷೆ ನಡುವೆ ವಾಶ್‌ರೂಂಗೆ ತೆರಳಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ವಿದ್ಯಾರ್ಥಿಗಳ ಅತೀ ಮುಖ್ಯ 10ನೇ ತರಗತಿ ಪರೀಕ್ಷೆ ಮಾತ್ರವಲ್ಲ ಆಕೆಯ ಭವಿಷ್ಯವೇ ಈಗ ಸಂಕಷ್ಟಕ್ಕೆ ಸಿಲುಕಿದೆ. 

ಇಂದೋರ್ (ಫೆ.26) ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ 10ನೇ ತರಗತಿ ಅತೀ ಮುಖ್ಯ ಘಟ್ಟ. ಭವಿಷ್ಯದ ದೃಷ್ಟಿಯಿಂದ 10ನೇ ತರಗತಿ ಅಂಕಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ. ಇಂದು (ಫೆ.26) 10ನೇ ತರಗತಿಯ ಗಣಿತ ಪರೀಕ್ಷೆ. ಹಲವು ವಿದ್ಯಾರ್ಥಿಗಳ ಮುಖದಲ್ಲಿ ಭಯ ಸಹಜವಾಗಿ ಇದ್ದೇ ಇರುತ್ತೆ. ಈ ವಿದ್ಯಾರ್ಥಿನಿಯ ಮುಖದಲ್ಲೂ ಆ ಭಯ ಇತ್ತು. ಪರೀಕ್ಷೆ ಆರಂಭಗೊಂಡಿತ್ತು. ಉತ್ತರ ಬರೆಯುವ ನಡುವೆ ವಿದ್ಯಾರ್ಥಿನಿಗೆ ಅಸ್ವಸ್ಥತೆ ಎದುರಾಗಿದೆ. ವಾಶ್‌ರೂಂಗೆ ತೆರಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮೇಲ್ವಿಚಾರಕಲ್ಲಿ ಮನವಿ ಮಾಡಿ ವಾಶ್‌ರೂಂಗೆ ತೆರಳಿದ್ದಾಳೆ. ದುರಂತ ಅಂದರೆ ಈ ವಿದ್ಯಾರ್ಥಿನಿ ಬಾತ್‌ರೂಂನಲ್ಲೇ ಗಂಡು ಮಗುವಿಗೆ ಜನ್ಮನೀಡಿದ ಘಟನೆ ಮಧ್ಯಪ್ರದೇಶ ಧಾರ್ ಜಿಲ್ಲಿಯಲ್ಲಿ ನಡೆದಿದೆ.

ಬಾತ್‌ರೂಂನಿಂ ಕೇಳಿತು ಮಗು ಶಬ್ದ

ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥತೆ ಕಾಣಿಸಿಕೊಂಡ ಬೆನ್ನಲ್ಲೇ ವಾಶ್‌ರೂಂಗೆ ತೆರಳಲು ಅನುಮತಿ ಕೇಳಿದ್ದಾಳೆ. ಈಕೆಯ ಪರಿಸ್ಥಿತಿ ನೋಡಿದ ಮೇಲ್ವಿಚಾರಕರು ಅನುಮತಿ ನೀಡಿದ್ದಾರೆ.ವಾಶ್‌ರೂಂಗೆ ತೆರಳಿದ ಕೆಲ ಹೊತ್ತಲ್ಲೇ ಮಗುವಿನ ಅಳುವ ಶಬ್ದ ಕೇಳಿಸಿದೆ. ಇತ್ತ ವಿದ್ಯಾರ್ಥಿನಿಗೆ ಆತಂಕ, ಭಯ, ಅಳು ಬಂದರೂ ನಿಯಂತ್ರಿಸುವ ಪ್ರಯತ್ನ ಮಾಡಿದ್ದಾಳೆ. ಮಗುವಿನ ಶಬ್ದ ಕೇಳಿ ಶಿಕ್ಷಕಿ ತಕ್ಷಣವೇ ವಾಶ್‌ರೂಂನತ್ತ ಧಾವಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ತೀವ್ರ ಅಸ್ವಸ್ಥಗೊಂಡಿದ್ದರೆ, ಪಕ್ಕದಲ್ಲೇ ನವಜಾತ ಮಗು ಅಳುತ್ತಿದೆ.

ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ

ತಕ್ಷಣವೇ ಶಿಕ್ಷಕರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಮಗುವಿನ ತೂಕ 2 ಕೆಡಿ. ವಿದ್ಯಾರ್ಥಿನಿ ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಆದರೆ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರು, ಪೋಲಿಸರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮಗಳ ಈ ಸ್ಥಿತಿಯ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಪೊಲೀಸರು ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದಿದ್ದಾರೆ. ಪರಿಸ್ಥಿತಿಗೆ ಕಾರಣ ಕುರಿತು ಹಲವು ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಇದುವರೆಗೆ ಪೋಷಕರಾಗಲಿ, ಕುಟುಂಬಸ್ಥರಾಗಲಿ ದೂರು ನೀಡಿಲ್ಲ. ಆದರೆ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಗೆ ಈಗಾಗಲೇ ನಿಶ್ಚಿತಾರ್ಥ ಮಾಡಲಾಗಿದೆ. 18 ವಯಸ್ಸು ತುಂಬುತ್ತಿದ್ದಂತೆ ಮದುವೆ ಮಾಡಲು ಪೋಷಕರು ಮುಂದಾಗಿದ್ದರು. ಇದೀಗ ಪೊಲೀಸರು ಹಲವು ಮೂಲಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರದಲ್ಲಿ 1.55 ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್ ವಶ, 235 ಮಂದಿ ಬಂಧನ!
ಕನ್ನಡದ ನಿರ್ದೇಶಕನ ಕಿಡ್ನಾಪ್, ದುನಿಯಾ ವಿಜಯ್ ಸಿನೆಮಾದ ನಟಿ ಐಶ್ವರ್ಯಾ ಸೇರಿ 11 ಮಂದಿ ಅರೆಸ್ಟ್!