
ರಾಜ್ಯದ ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ಕೇಂದ್ರಗಳ ತಲಾ ಒಂದು ವಿದ್ಯುತ್ ಉತ್ಪಾದನಾ ಘಟಕಗಳು ಹಠಾತ್ ಸ್ಥಗಿತಗೊಂಡ ಕಾರಣ ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಹಠಾತ್ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ಕಿರಿಕಿರಿ ಅನುಭವಿಸುವಂತಾಯಿತು.
ಬಿಟಿಪಿಎಸ್ ಮತ್ತು ಆರ್‌ಟಿಪಿಎಸ್ ಘಟಕಗಳಲ್ಲಿ ತಾಂತ್ರಿಕ ಕಾರಣದಿಂದ ಒಂದೊಂದು ಘಟಕ ಸ್ಥಗಿತಗೊಂಡ ಕಾರಣ 1500 ಮೆಗಾವ್ಯಾಟ್ ವಿದ್ಯುತ್ ಕೊರತೆ ಉಂಟಾಗಿದೆ. ಕೊರತೆ ಸರಿದೂಗಿಸಲು ಕೇಂದ್ರ ಗ್ರಿಡ್‌ನಿಂದ ಬುಧವಾರದಿಂದಲೇ ವಿದ್ಯುತ್ ಖರೀದಿ ಮಾಡಲಾಗುವುದು. ಆದಾಗ್ಯೂ ಇನ್ನು ಮುಂದೆಯೂ ವ್ಯತ್ಯಯ ಉಂಟಾದಲ್ಲಿ ನಾಗರಿಕರು ಸಹಕರಿಸುವಂತೆ ಬೆಸ್ಕಾಂ
ಕೋರಿದೆ. ರಾಜ್ಯದ ಎರಡು ಪ್ರಮುಖ ವಿದ್ಯುತ್ ಘಟಕಗಳು ಸ್ಥಗಿತಗೊಂಡಿದ್ದರಿಂದ ಎಸ್ಕಾಂಗಳಲ್ಲಿ ಹಠಾತ್ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.