ಇಸ್ರೇಲ್ ಜೊತೆ ರಹಸ್ಯ ಸಭೆಗಳನ್ನು ನಡೆಸಿದ ಪ್ರೀತಿ ಪಟೇಲ್ ಈಗ ವಿವಾದದ ಕೇಂದ್ರಬಿಂದು

Published : Nov 08, 2017, 03:17 PM ISTUpdated : Apr 11, 2018, 01:01 PM IST
ಇಸ್ರೇಲ್ ಜೊತೆ ರಹಸ್ಯ ಸಭೆಗಳನ್ನು ನಡೆಸಿದ ಪ್ರೀತಿ ಪಟೇಲ್ ಈಗ ವಿವಾದದ ಕೇಂದ್ರಬಿಂದು

ಸಾರಾಂಶ

* ವಿವಾದಕ್ಕೆ ಗುರಿಯಾಗಿರುವ ಬ್ರಿಟನ್ ಸರಕಾರದ ಪ್ರಧಾನ ಕಾರ್ಯದರ್ಶಿ ಪ್ರೀತಿ ಪಟೇಲ್ * ಬ್ರಿಟನ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ಯಾಬಿನೆಟ್ ದರ್ಜೆ ಹುದ್ದೆಗೇರಿದ ಭಾರತೀಯ ಮೂಲದ ವ್ಯಕ್ತಿ * ಇಸ್ರೇಲ್'ನಲ್ಲಿ 12 ಬಾರಿ ರಹಸ್ಯ ಸಭೆಗಳಲ್ಲಿ ಭಾಗವಹಿಸಿದ್ದ ಪ್ರೀತಿ ಪಟೇಲ್ * ಬ್ರಿಟನ್ ಸರಕಾರದಿಂದ ಪ್ರೀತಿಯ ಉಚ್ಛಾಟನೆ ಸಾಧ್ಯತೆ

ಲಂಡನ್(ನ. 08): ಅನಧಿಕೃತವಾಗಿ ವಿದೇಶಾಂಗ ವ್ಯವಹಾರ ನಡೆಸಿದ ಬ್ರಿಟನ್ ಸಂಸದೆ ಪ್ರೀತಿ ಪಟೇಲ್ ಈಗ ತಮ್ಮ ದೇಶದಲ್ಲಿ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ಪಕ್ಷಭೇದ ಮರೆತು ಎಲ್ಲಾ ಜನಪ್ರತಿನಿಧಿಗಳು ಪ್ರೀತಿ ಪಟೇಲ್ ಅವರನ್ನು ತರಾಟೆಗೆ ತೆಗೆದುಕೊಂಡಿವೆ. ಇಸ್ರೇಲ್'ನಲ್ಲಿ ರಹಸ್ಯವಾಗಿ 12 ಮೀಟಿಂಗ್'ಗಳಲ್ಲಿ ಪ್ರೀತಿ ಭಾಗವಹಿಸಿದ್ದು ಈ ವಿವಾದಕ್ಕೆ ಕಾರಣವಾಗಿದೆ. ಪ್ರೀತಿ ಪಟೇಲ್ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರಾದರೂ ಅವರನ್ನು ಸಂಪುಟದಿಂದ ಹೊರಹಾಕುವ ಸಾಧ್ಯತೆ ದಟ್ಟವಾಗಿದೆ.

ಥೆರೆಸಾ ಮೇ ನೇತೃತ್ವದ ಬ್ರಿಟನ್ ಸರಕಾರದಲ್ಲಿ ಪ್ರೀತಿ ಪಟೇಲ್ ಅವರು ಅಂತಾಷ್ಟ್ರೀಯ ಅಭಿವೃದ್ಧಿ ಕಾರ್ಯದರ್ಶಿಯಾಗಿದ್ದಾರೆ. ಬ್ರಿಟನ್'ನ ಇತಿಹಾಸದಲ್ಲಿ ಸಂಪುಟ ದರ್ಜೆಯ ಹುದ್ದೆ ಪಡೆದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಪ್ರೀತಿ ಪಟೇಲ್ ಅವರದ್ದು. ಬ್ರಿಟನ್'ನಲ್ಲಿರುವ ಭಾರತೀಯ ಸಮುದಾಯವು ಕನ್ಸರ್ವೇಟಿವ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ಕೊಡಲು ಇದೇ ಪ್ರೀತಿ ಪಟೇಲ್ ಕಾರಣ. ಹೊಸ ಇತಿಹಾಸ ನಿರ್ಮಿಸಿದ 45 ವರ್ಷದ ಪ್ರೀತಿ ಪಟೇಲ್ ಇಸ್ರೇಲ್'ನಲ್ಲಿ ರಹಸ್ಯವಾಗಿ 12 ಸಭೆಗಳಲ್ಲಿ ಭಾಗವಹಿಸುವ ಮೂಲಕ ಎಡವಟ್ಟು ತಂದಿಟ್ಟುಕೊಂಡಿದ್ದಾರೆ. ರಜೆ ಹಾಕಿ ಇಸ್ರೇಲ್'ಗೆ ಹೋಗುತ್ತಿದ್ದ ಪ್ರೀತಿ, ನಿಯಮ ಮತ್ತು ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಪ್ರಧಾನಿ ಬೆಂಜಮಿನ್ ನೆಟ್ಯಾನ್ಯಹು ಸೇರಿದಂತೆ ಅಲ್ಲಿಯ ಸರಕಾರದ ಪ್ರತಿನಿಧಿಗಳೊಂದಿಗೆ ರಹಸ್ಯೆ ಸಭೆ ನಡೆಸುತ್ತಿದ್ದರೆನ್ನಲಾಗಿದೆ.

ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಬ್ರಿಟನ್ ದೇಶ ಬಹಳ ಸಂಕೀರ್ಣ ರಾಜತಾಂತ್ರಿಕ ಸಂಬಂಧವೊಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಪ್ರತಿನಿಧಿಯೊಬ್ಬರು ಇಸ್ರೇಲ್ ಜೊತೆ ರಹಸ್ಯ ಮಾತುಕತೆ ನಡೆಸಿರುವುದು ಬ್ರಿಟನ್ ದೇಶಕ್ಕೆ ನುಂಗಲಾರದ ತುತ್ತಾಗಿದೆ. ಆಡಳಿತ ಪಕ್ಷದ ಸದಸ್ಯರೇ ಪ್ರೀತಿ ಪಟೇಲ್ ಅವರನ್ನು ವಿರೋಧಿಸುತ್ತಿದ್ದಾರೆ. "ಗೋಲನ್ ಹೈಟ್ಸ್" ಎಂಬ ಸ್ಥಳದಲ್ಲಿ ಇಸ್ರೇಲ್'ಗೆ ನೆರವು ಒದಗಿಸುವ ಕುರಿತು ಪ್ರೀತಿ ಪಟೇಲ್ ತಮ್ಮದೊಂದು ಸಭೆಯಲ್ಲಿ ಭರವಸೆ ನೀಡಿದ್ದರೆನ್ನಲಾಗಿದೆ. ಆದರೆ, ಈ ಗೋಲನ್ ಹೈಟ್ಸ್ ಎಂಬುದು ಸಿರಿಯಾದಿಂದ ಇಸ್ರೇಲ್ ವಶಪಡಿಸಿಕೊಂಡ ಪ್ರದೇಶವಾಗಿದೆ. ಬ್ರಿಟನ್ ಇದನ್ನು ಬಲವಾಗಿ ವಿರೋಧಿಸುತ್ತಾ ಬಂದಿದೆ. ಇದೇ ಕಾರಣಕ್ಕೆ, ಸಿರಿಯಾದ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಇಸ್ರೇಲ್ ನಡೆಸುತ್ತಿರುವ ಆಸ್ಪತ್ರೆಗೆ ಬ್ರಿಟನ್ ಯಾವುದೇ ವೈದ್ಯಕೀಯ ನೆರವು ನೀಡಲು ನಿರಾಕರಿಸುತ್ತಿದೆ. ಹೀಗಿರುವಾಗ ಪ್ರೀತಿ ಪಟೇಲ್ ಅದ್ಯಾವ ಧೈರ್ಯದಿಂದ ಇಂಥ ಕೆಲಸ ಮಾಡಿದರು ಎಂದನಿಸದೇ ಇರದು.

ಪ್ರೀತಿ ಪಟೇಲ್ ಮೊದಲಿಂದಲೂ ಇಸ್ರೇಲ್ ಅಭಿಮಾನಿ. ಇನ್ನು ಇಸ್ರೇಲ್'ಗೆ ಭಾರತವೆಂದರೆ ಆಪ್ತ ಭಾವನೆ. ಪ್ರೀತಿ ಪಟೇಲ್ ಇಸ್ರೇಲ್'ನಲ್ಲಿ ಪ್ರಧಾನಿಯನ್ನು ಭೇಟಿಯಾದಾಗ ತಮ್ಮ ಭಾರತೀಯ ಹಿನ್ನೆಲೆ ಬಗ್ಗೆ ತಿಳಿಸಿದ್ದರಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು