ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್

First Published May 3, 2018, 11:12 AM IST
Highlights

ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್ ಹೊಡೆದಿರುವ ಘಟನೆ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.   ಶಿವಕುಮಾರ್ ವಿದ್ಯುತ್ ಕಂಬ ಏರಿದ ಮಾಜಿ ಗುತ್ತಿಗೆ ನೌಕರ. ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ, ಪರಿಶೀಲನೆಗೆ ಆಗಮಿಸಿದ್ದ ಚೆಸ್ಕಾಂ ಸಿಬ್ಬಂದಿ ಪುಟ್ಟರಾಜು ತಾನು ಕಂಬ ಹತ್ತುವ ಬದಲು ಶಿವಕುಮಾರ್‌ನನ್ನು  ಹತ್ತಿಸಿದ ಆರೋಪ ಕೇಳಿ ಬಂದಿದೆ.

ಮೈಸೂರು (ಮೇ. 03): ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್ ಹೊಡೆದಿರುವ ಘಟನೆ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಶಿವಕುಮಾರ್ ವಿದ್ಯುತ್ ಕಂಬ ಏರಿದ ಮಾಜಿ ಗುತ್ತಿಗೆ ನೌಕರ. ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ, ಪರಿಶೀಲನೆಗೆ ಆಗಮಿಸಿದ್ದ ಚೆಸ್ಕಾಂ ಸಿಬ್ಬಂದಿ ಪುಟ್ಟರಾಜು ತಾನು ಕಂಬ ಹತ್ತುವ ಬದಲು ಶಿವಕುಮಾರ್‌ನನ್ನು  ಹತ್ತಿಸಿದ ಆರೋಪ ಕೇಳಿ ಬಂದಿದೆ.  

ಶಿವಕುಮಾರ ಗುತ್ತಿಗೆ ಅವಧಿ 3 ತಿಂಗಳ ಹಿಂದೆಯೇ ಮುಗಿದಿತ್ತು. ಆದರೂ ಸಹಾಯಕ್ಕೆ ಅಂತ ಕರೆದುಕೊಂಡು ಹೋಗಿದ್ದ ಶಿವಕುಮಾರ್. ದುರಸ್ತಿ ಮಾಡುವ ವೇಳೆ ಶಿವಕುಮಾರ್‌ಗೆ ವಿದ್ಯುತ್ ಶಾಕ್ ಹೊಡೆದಿದೆ.  ಕಂಬದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಶಿವಕುಮಾರ್’ನನ್ನು ಕೂಡಲೇ ಕಂಬದಿಂದ ಇಳಿಸಿ ಹುಣಸೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.  ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 
 

click me!