ಹಿರಿಯರಿಗೆ ಕೇಂದ್ರ ಸರ್ಕಾರದ ಅಭಯ

First Published May 3, 2018, 10:32 AM IST
Highlights

ಪ್ರಧಾನಮಂತ್ರಿ ವಯೋ ವಂದನಾ (ಪಿಎಂವಿವಿವೈ) ಯೋಜನೆಯಡಿ ಹಿರಿಯ ನಾಗರಿಕರು ಹೂಡಿಕೆ ಮಾಡಬಹುದಾದ 7.5 ಲಕ್ಷ ರು. ಮಿತಿಯನ್ನು ಕೇಂದ್ರ ಸರ್ಕಾರ 15 ಲಕ್ಷ ರು.ಗೆ ಏರಿಕೆ ಮಾಡಿದೆ. 

ನವದೆಹಲಿ: ಪ್ರಧಾನಮಂತ್ರಿ ವಯೋ ವಂದನಾ (ಪಿಎಂವಿವಿವೈ) ಯೋಜನೆಯಡಿ ಹಿರಿಯ ನಾಗರಿಕರು ಹೂಡಿಕೆ ಮಾಡಬಹುದಾದ 7.5 ಲಕ್ಷ ರು. ಮಿತಿಯನ್ನು ಕೇಂದ್ರ ಸರ್ಕಾರ 15 ಲಕ್ಷ ರು.ಗೆ ಏರಿಕೆ ಮಾಡಿದೆ. 
ಇದು ಹಿರಿಯ ನಾಗರಿಕರು ತಿಂಗಳಿಗೆ 10 ಸಾವಿರ ರು. ವರೆಗೂ ಪಿಂಚಣಿ ಪಡೆಯಲು ಅನುವಾಗಲಿದೆ. ಈ ಯೋಜನೆಯಡಿ 10 ವರ್ಷಗಳಿಗೆ ವಾರ್ಷಿಕ 8ರಷ್ಟು ಬಡ್ಡಿ ನಿಗದಿಪಡಿಸಲಾಗಿದ್ದು, ಇದನ್ನು ಹಿರಿಯ ನಾಗರಿಕರು ಪ್ರತಿ ತಿಂಗಳು, ಮೂರು ತಿಂಗಳು ಅಥವಾ 6 ತಿಂಗಳಿಗೊಮ್ಮೆ ಪಿಂಚಣಿಯಾಗಿ ಪಡೆಯಬಹುದಾಗಿದೆ.

ಇತರೆ ಹೂಡಿಕೆ ಯೋಜನೆಗಳು ಇತ್ತೀಚೆಗೆ ಕಡಿಮೆ ಆದಾಯ ನೀಡುತ್ತಿರುವ ಕಾರಣ ಪಿಂಚಣಿಯನ್ನೇ ನಂಬಿದ್ದ ಹಿರಿಯ ನಾಗರಿಕರು ಸಂಕಷ್ಟ ಎದುರಿಸುವಂತಾಗಿತ್ತು. ಹೀಗಾಗಿ ಕನಿಷ್ಠ ಶೇ.೮ರಷ್ಟು ಬಡ್ಡಿ ನೀಡುವ ಯೋಜನೆ ಜಾರಿಗೊಳಿಸಲಾಗಿತ್ತು. 
ಆದರೆ 7.5 ಲಕ್ಷ ರು. ಹಣದ ಮಿತಿ ಹಾಕಿದ್ದ ಕಾರಣ, ಹೆಚ್ಚಿನ ಪಿಂಚಣಿ ಪಡೆಯುವುದು ಸಾಧ್ಯವಿರಲಿಲ್ಲ. ಇದೀಗ ಹೂಡಿಕೆ ಮಿತಿಯನ್ನು 15 ಲಕ್ಷ ರು.ಗೆ ಏರಿಸುವ ಕಾರಣ ಹಿರಿಯ ನಾಗರಿಕರು ಮಾಸಿಕ 10000 ರು.ವರೆಗೆ ಪಿಂಚಣಿ ಪಡೆಯಬಹುದಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹೂಡಿಕೆಮಾಡಲು ಈ ಹಿಂದೆ ನಿಗದಿ ಮಾಡಲಾಗಿದ್ದ 2018 ರ ಮೇ 4ರ ಗಡುವನ್ನು 2020 ರ ಮಾ.31ರವರೆಗೂ ವಿಸ್ತರಿಸಲಾಗಿದೆ.

click me!