ರೈತರೇ ನಿಮ್ಮ ಸಾಲ ಮನ್ನಾ ಆಗೋದು ಮರೀಚಿಕೆ..! ಎಲೆಕ್ಷನ್ ಹೊಸ್ತಿಲಲ್ಲಿ ರಾಜ್ಯ ಸರ್ಕಾರಕ್ಕೆ ಭರ್ಜರಿ ಶಾಕ್..!

By Suvarna Web DeskFirst Published Oct 18, 2017, 5:55 PM IST
Highlights

ಇದರ ಬೆನ್ನಲ್ಲೇ ನವೀನ್ ಅವರನ್ನು ಚುನಾವಣಾ ಆಯೋಗ ಹಿಮಾಚಲ ಪ್ರದೇಶ ಚುನಾವಣಾ ರಾಜ್ಯ ಉಸ್ತುವಾರಿಗೆ ನೇಮಿಸಿದೆ.

ಬೆಂಗಳೂರು(ಅ.18): ಚುನಾವನಾ ಹೊಸ್ತಿಲಲ್ಲಿರುವ ರಾಜ್ಯ ಸರ್ಕಾರಕ್ಕೆ ಭರ್ಜರಿ ಶಾಕ್ ಎದುರಾಗಿದೆ. ರೈತರ ಸಾಲಮನ್ನಾಗೆ ಹಣ ಕೊಡಬೇಕಿದ್ದ ಅಧಿಕಾರಿ ಸದ್ಯಕ್ಕೆ ಸಿಗುತ್ತಿಲ್ಲ. ಹಿಮಾಚಲಪ್ರದೇಶ ಚುನಾವಣಾ ಉಸ್ತುವಾರಿಗೆ ಆ ಅಧಿಕಾರಿಯನ್ನು ನೇಮಕ ಮಾಡಿರುವುದರಿಂದ ಸರ್ಕಾರಕ್ಕೆ ಸಂಕಟ ಎದುರಾಗಿದೆ.

ರೈತರ ಸಾಲ ಮನ್ನಾಗೆ ಮೈಸೂರು ಮಿನರಲ್ ಲಿಮಿಟೆಡ್'ನಿಂದ ಹಣ ಪಡೆಯಲು ಸರ್ಕಾರ ಯತ್ನಿಸಿತ್ತು. ಅಲ್ಲಿನ ಹೆಚ್ಚುವರಿ ಹೂಡಿಕೆ ಹಣ 1400 ಕೋಟಿ ರೂ. ಗಳನ್ನು ಅಪೆಕ್ಸ್ ಬ್ಯಾಂಕ್'ಗೆ ವರ್ಗಾಯಿಸಲು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಐಎಎಸ್ ಅಧಿಕಾರಿ ನವೀನ್​​ರಾಜ್​​ಸಿಂಗ್ ಅವರಿಗೆ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ನವೀನ್ ಅವರನ್ನು ಚುನಾವಣಾ ಆಯೋಗ ಹಿಮಾಚಲ ಪ್ರದೇಶ ಚುನಾವಣಾ ರಾಜ್ಯ ಉಸ್ತುವಾರಿಗೆ ನೇಮಿಸಿದೆ. ಈ ಕಾರಣದಿಂದಾಗಿ ರೈತರ ಸಾಲ ಮನ್ನಾಕ್ಕೆ ಮರೀಚಿಕೆಯಾಗುವ ಸಾಧ್ಯತೆಯಿದೆ. ಅಲ್ಲದೆ ನವೀನ್ ಅವರನ್ನು ಕೇಂದ್ರಕ್ಕೆ ಕರೆಸಿಕೊಳ್ಳದಂತೆ ಸಚಿವ ವಿನಯ್ ಕುಲಕರ್ಣಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

click me!