ಪಂಚರಾಜ್ಯಗಳಲ್ಲಿ ಚುನಾವಣೆ ವೇಳಾಪಟ್ಟಿ ಪ್ರಕಟ; ಫೆ.4ರಿಂದ ಮಾ.8ರವರೆಗೆ ಚುನಾವಣೆ; ಮಾ.11 ಫಲಿತಾಂಶ

Published : Jan 04, 2017, 08:26 AM ISTUpdated : Apr 11, 2018, 12:38 PM IST
ಪಂಚರಾಜ್ಯಗಳಲ್ಲಿ ಚುನಾವಣೆ ವೇಳಾಪಟ್ಟಿ ಪ್ರಕಟ; ಫೆ.4ರಿಂದ ಮಾ.8ರವರೆಗೆ ಚುನಾವಣೆ; ಮಾ.11 ಫಲಿತಾಂಶ

ಸಾರಾಂಶ

400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ನಿರೀಕ್ಷೆಯಂತೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಣಿಪುರದಲ್ಲಿ 2 ಹಂತದಲ್ಲಿ ನಡೆದರೆ, ಉಳಿದ ಮೂರು ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.

ನವದೆಹಲಿ(ಜ. 04): ಉತ್ತರಪ್ರದೇಶ, ಪಂಜಾಬ್, ಮಣಿಪುರ, ಗೋವಾ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಚುನಾವಣಾ ದಿನಾಂಕಗಳು ಘೋಷಣೆಗೊಂಡಿವೆ. ಈ ಪಂಚ ರಾಜ್ಯಗಳಲ್ಲಿ ಫೆಬ್ರವರಿ 4ರಿಂದ ಮಾರ್ಚ್ 8ರವರೆಗೆ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮಾರ್ಚ್ 11ರಂದು ಎಲ್ಲಾ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ನಿರೀಕ್ಷೆಯಂತೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಣಿಪುರದಲ್ಲಿ 2 ಹಂತದಲ್ಲಿ ನಡೆದರೆ, ಉಳಿದ ಮೂರು ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.

ಉತ್ತರ ಪ್ರದೇಶ - ಒಟ್ಟು ಸ್ಥಾನಗಳು 403
* ಏಳು ಹಂತದ ಚುನಾವಣೆ
ಫೆ. 11, 15, 19, 23, 27, ಮಾ. 4 ಮತ್ತು 8ರಂದು ಮತದಾನ

ಉತ್ತರಾಖಂಡ -  ಒಟ್ಟು ಸ್ಥಾನಗಳು 70
ಚುನಾವಣಾ ದಿನಾಂಕ: ಫೆ. 15

ಗೋವಾ -  ಒಟ್ಟು ಸ್ಥಾನಗಳು 40
ಚುನಾವಣಾ ದಿನಾಂಕ: ಫೆ. 4

ಮಣಿಪುರ -  ಒಟ್ಟು ಸ್ಥಾನಗಳು 40
ಚುನಾವಣಾ ದಿನಾಂಕ: ಮಾ. 4 ಮತ್ತು 8

ಪಂಜಾಬ್​ -  ಒಟ್ಟು ಸ್ಥಾನಗಳು 117
ಚುನಾವಣಾ ದಿನಾಂಕ: ಫೆ. 4

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುವ ನಿಧಿ ಯೋಜನೆ: 3.62 ಲಕ್ಷ ನಿರುದ್ಯೋಗಿಗಳ ನೋಂದಣಿ, 2,326 ಮಂದಿಗೆ ಸಿಕ್ಕಿದೆ ಕೆಲಸ!
ಇನ್ನೆರಡು ವರ್ಷದಲ್ಲಿ 175 ಕಿ.ಮೀ ಮೆಟ್ರೋ ಸೇವೆ ಜನರಿಗೆ ಲಭ್ಯ : ಡಿ.ಕೆ.ಶಿವಕುಮಾರ್