ಸಂತ್ರಸ್ತ ಯುವತಿಯರು ನಾಪತ್ತೆ

Published : Jan 04, 2017, 06:45 AM ISTUpdated : Apr 11, 2018, 12:55 PM IST
ಸಂತ್ರಸ್ತ ಯುವತಿಯರು ನಾಪತ್ತೆ

ಸಾರಾಂಶ

ಹೊಸವರ್ಷದ ಬೆಳಗಿನ ಜಾವ ಸುಮಾರು 2:40ರ ಸಮಯದಲ್ಲಿ  ಬೈಕಿನಲ್ಲಿ ಬಂದಿದ್ದ ಇಬ್ಬರು ಯುವಕರು ಒಬ್ಬಂಟಿಯಾಗಿ ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಮೇಲೆರಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು

ಬೆಂಗಳೂರು(ಜ.4): ಕಾಮುಕರ ದೌರ್ಜನ್ಯದ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾದ ಬಳಿಕ ಕಮ್ಮನಹಳ್ಳಿಯ ಇಬ್ಬರು ಸಂತ್ರಸ್ತ ಯುವತಿಯರು ನಾಪತ್ತೆಯಾಗಿದ್ದಾರೆ. ಈ ಯುವತಿಯರು ಯಾರೆಂಬದು ಈವರೆಗೂ ಪತ್ತೆಯಾಗಿಲ್ಲ. ಯುವತಿಯರ ಪತ್ತೆಗೆ ಬಾಣಸವಾಡಿ ಪೊಲೀಸರು ಮುಂದಾಗಿದ್ದಾರೆ. ಕಮ್ಮನಹಳ್ಳಿ 7ನೇ ಕ್ರಾಸ್​​​ನ ಮನೆಯೊಂದರಲ್ಲಿದ್ದ ಸಂತ್ರಸ್ತ ಯುವತಿಯರು ದೌರ್ಜನ್ಯದ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾದ ಬಳಿಕ ನಾಪತ್ತೆಯಾಗಿದ್ದಾರೆ.

ಹೊಸವರ್ಷದ ಬೆಳಗಿನ ಜಾವ ಸುಮಾರು 2:40ರ ಸಮಯದಲ್ಲಿ  ಬೈಕಿನಲ್ಲಿ ಬಂದಿದ್ದ ಇಬ್ಬರು ಯುವಕರು ಒಬ್ಬಂಟಿಯಾಗಿ ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಮೇಲೆರಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು . ಯುವತಿ ಇನ್ನೇನು ರಸ್ತೆ ಬದಿಯಲ್ಲಿದ್ದ ತನ್ನ ಮನೆಯೊಳಗೆ ಹೋಗಬೇಕು ಎನ್ನುವಷ್ಟರಲ್ಲಿ ಆಕೆಯ ಮೇಲೆರಗಿ ಲೈಂಗಿಕ ಕಿರುಕುಳ ನೀಡಿದ್ದರು. ಆ ಯುವತಿ ಕೊಸರಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ರಸ್ತೆಯಲ್ಲಿ ಬಿಸಾಕಿ ಸವಾರರು ಪರಾರಿಯಾಗಿದ್ದರು.

ಘಟನೆ ನಡೆದಿದ್ದು ಎಲ್ಲಿ :  

5ನೇ ಮುಖ್ಯ ರಸ್ತೆ, 7ನೇ ಕ್ರಾಸ್​, HRBR ಲೇಔಟ್​, ಕಮ್ಮನಹಳ್ಳಿ

ರಾತ್ರಿ 1 ಗಂಟೆ : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಪಾರ್ಟಿ ಮುಗಿಸಿದ ಯುವತಿಯರು

ಮಧ್ಯರಾತ್ರಿ 1:30 : ಪಾರ್ಟಿ ಮುಗಿಸಿ ಆಟೋ ಹತ್ತಿದ ಇಬ್ಬರು ಯುವತಿಯರು

ಮಧ್ಯರಾತ್ರಿ 2: 40 ನಿಮಿಷ:  HRBR ಲೇಔಟ್​  5ನೇ ಮುಖ್ಯ ರಸ್ತೆ, 7ನೇ ಕ್ರಾಸ್​ನಲ್ಲಿ ಆಟೋ ನಿಲ್ಲಿಸಿದ ಯುವತಿಯರು

ಮಧ್ಯರಾತ್ರಿ 2 :40 ನಿಮಿಷ : ಮೊದಲು ಆಟೋ ಇಳಿದ ಯುವತಿ ಮನೆ ತಲುಪಿದಳು

ಮಧ್ಯರಾತ್ರಿ 2 :41 ನಿಮಿಷ : ಆಟೋ ಚಾಲಕನಿಗೆ ದುಡ್ಡು ಕೊಟ್ಟು ಇಳಿದ ಮತ್ತೊಬ್ಬ ಯುವತಿ

ಮಧ್ಯರಾತ್ರಿ 2 : 41 ನಿಮಿಷ 13 ಸೆಕೆಂಡ್ : ಆಕ್ಟಿವಾ ಹೋಂಡಾ ಗಾಡಿಯಲ್ಲಿ ಹಿಂಬಾಲಿಸಿ ಬಂದ ಇಬ್ಬರು ಕಾಮುಕರು

ಮಧ್ಯರಾತ್ರಿ 2 : 41 ನಿಮಿಷ 18 ಸೆಕೆಂಡ್​ : ಮತ್ತೊಂದು ದ್ವಿಚಕ್ರ ವಾಹನದಲ್ಲಿ ರಸ್ತೆಯಲ್ಲೇ ನಿಂತ ಮತ್ತಿಬ್ಬರು ಕಾಮುಕರು

ಮಧ್ಯರಾತ್ರಿ 2 : 41 ನಿಮಿಷ 25 ಸೆಕೆಂಡ್ : ದ್ವಿಚಕ್ರ ವಾಹನದಿಂದ ಇಳಿದು ಹುಡುಗಿಯನ್ನು ಅಡ್ಡಗಟ್ಟಿ ಅಪ್ಪಿ ಹಿಡಿದ ಹಿಂಸಿಸಿದ ಕಾಮುಕ

ಮಧ್ಯರಾತ್ರಿ 2 : 41 ನಿಮಿಷ 33 ಸೆಕೆಂಡ್ : ಮತ್ತೊಂದು ದ್ವಿಚಕ್ರ ವಾಹನದಲ್ಲಿ ಬಂದ ಮತ್ತಿಬ್ಬರು ಕಾಮುಕರ ಗ್ಯಾಂಗ್​

ಮಧ್ಯರಾತ್ರಿ 2 : 41 ನಿಮಿಷ 37 ಸೆಕೆಂಡ್ : ಹುಡುಗಿಯನ್ನು ದ್ವಿಚಕ್ರ ವಾಹನದತ್ತ ಎಳೆದೊಯ್ದು ಹಿಂಸಿಸಿದ ಕಾಮುಕ

ಮಧ್ಯರಾತ್ರಿ 2 : 41 ನಿಮಿಷ 46 ಸೆಕೆಂಡ್ : ಹುಡುಗಿಯನ್ನು ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಲು ಯತ್ನಿಸಿದ ಕಾಮುಕರು

ಮಧ್ಯರಾತ್ರಿ 2 : 41 ನಿಮಿಷ 59 ಸೆಕೆಂಡ್ : ಯುವತಿ ತೀವ್ರ ಪ್ರತಿಯೋಧ ವ್ಯಕ್ತಪಡಿಸಿದ್ದರಿಂದ ಹುಡುಗಿಯನ್ನು ರಸ್ತೆ ಮೇಲೆ ತಳ್ಳಿ ಪರಾರಿಯಾದ ಕಾಮುಕರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ
ನ್ಯಾಯಾಂಗದಲ್ಲಿ ಎಐ ಬಳಕೆಗೆ ಸಿಎಂ ಕಳವಳ, ನ್ಯಾಯಾಂಗ ಸಮ್ಮೇಳನದಲ್ಲಿ ಸಿದ್ದೆರಾಮಯ್ಯ ಹೇಳಿದ್ದೇನು?