ಕೇಂದ್ರ ಸರಕಾರದ ಭೀಮ್ ಆ್ಯಪ್'ನಲ್ಲಿ ಟ್ರಾನ್ಸಾಕ್ಷನ್ ಆಗುತ್ತಿಲ್ಲವೇ? ಏನು ಮಾಡಬೇಕು?

By Suvarna Web DeskFirst Published Jan 4, 2017, 7:32 AM IST
Highlights

ಇನ್ಸ್'ಟಾಲ್ ಮಾಡಿಕೊಂಡು ಬ್ಯಾಂಕ್ ಅಕೌಂಟ್ ಹಾಗೂ ಪಿನ್ ನಂಬರ್ ಸೆಟ್ ಮಾಡಿದರೂ ವಹಿವಾಟು ನಡೆಸಲಾಗುತ್ತಿಲ್ಲ, ಎರರ್ ಮೆಸೇಜ್ ಬರುತ್ತಿದೆ ಎಂಬ ಕಂಪ್ಲೇಂಟ್'ಗಳು ಹೆಚ್ಚಾಗಿ ಕೇಳಿಬರುತ್ತಿದೆ.

ನವದೆಹಲಿ(ಜ. 04): ಕೇಂದ್ರ ಸರಕಾರ ನಾಲ್ಕು ದಿನಗಳ ಹಿಂದೆ ಬಿಡುಗಡೆ ಮಾಡಿದ BHIM ಆ್ಯಪ್ ದೊಡ್ಡ ಸುದ್ದಿಯಾಗಿದೆ. ಅಷ್ಟೇ ಅಲ್ಲ, ಗೂಗಲ್ ಪ್ಲೇನಲ್ಲಿ ಈಗಾಗಲೇ 30 ಲಕ್ಷ ಜನರು ಇದನ್ನು ಡೌನ್'ಲೋಡ್ ಮಾಡಿಕೊಂಡಿದ್ದಾರೆ. ಲಕ್ಷಾಂತರ ಜನರು ವಹಿವಾಟನ್ನೂ ನಡೆಸಿದ್ದಾರೆ. ಅದರೆ, ಭೀಮ್ ಆ್ಯಪ್ ಮೂಲಕ ಟ್ರಾನ್ಸಾಕ್ಷನ್ ಮಾಡಲಾಗುತ್ತಿಲ್ಲವೆಂಬ ಸಾಕಷ್ಟು ದೂರುಗಳೂ ಬರುತ್ತಿವೆ. ಇನ್ಸ್'ಟಾಲ್ ಮಾಡಿಕೊಂಡು ಬ್ಯಾಂಕ್ ಅಕೌಂಟ್ ಹಾಗೂ ಪಿನ್ ನಂಬರ್ ಸೆಟ್ ಮಾಡಿದರೂ ವಹಿವಾಟು ನಡೆಸಲಾಗುತ್ತಿಲ್ಲ, ಎರರ್ ಮೆಸೇಜ್ ಬರುತ್ತಿದೆ ಎಂಬ ಕಂಪ್ಲೇಂಟ್'ಗಳು ಹೆಚ್ಚಾಗಿ ಕೇಳಿಬರುತ್ತಿದೆ.

ಏನು ಮಾಡಬೇಕು?
* BHIM ಆ್ಯಪ್ ಒತ್ತಿ ಪಿನ್ ನಂಬರ್ ಎಂಟ್ರಿ ಮಾಡಿ ಒಳಪ್ರವೇಶಿಸಿ
* ನಂತರ, ಕೆಳಗಡೆ ಇರುವ ಬ್ಯಾಂಕ್ ಅಕೌಂಟ್ ಒತ್ತಿರಿ
* ಅಲ್ಲಿ ನೀವು ರೀಸೆಟ್ ಯುಪಿಐ ಪಿನ್ ಎಂಬುದನ್ನು ಒತ್ತಿರಿ
* ಬಳಿಕ, ನಿಮ್ಮ ಕಾರ್ಡ್'ನ ನಂಬರ್ ನಮೂದಿಸಿರಿ
* ಆನಂತರ, ಹೊಸ ಯುಪಿಐ ಪಿನ್ ನಂಬರ್ ನಮೂದಿಸಿ

ಈಗ ನೀವು ಹಳೆಯ ಪಿನ್ ಮತ್ತು ಹೊಸ ಪಿನ್ ಮಧ್ಯ ಗೊಂದಲ ಮಾಡಿಕೊಳ್ಳುವುದು ಬೇಡ. ಆ್ಯಪ್ ಓಪನ್ ಮಾಡುವಾಗ ಹಳೆಯ ಪಿನ್ ನಂಬರ್ ನಮೂದಿಸಬೇಕು. ನೀವು ಪಾವತಿ ಮಾಡುವಾಗ ಹೊಸ ಪಿನ್ ನಂಬರ್ ನಮೂದಿಸಬೇಕು. ಆಗ ಟ್ರಾನ್ಸಾಕ್ಷನ್ ಯಶಸ್ವಿಯಾಗಿ ನಡೆಯುತ್ತದೆ.

click me!