
ತಿರುವನಂತಪುರಂ (ಜು.03): ಇಲ್ಲಿನ ಖ್ಯಾತ ಪದ್ಮನಾಭ ದೇವಸ್ಥಾನದ ವಿಗ್ರಹದಿಂದ 8 ವಜ್ರಗಳು ಕಾಣೆಯಾಗಿರುವ ಆಘಾತಕಾರಿ ವಿಚಾರವನ್ನು ಅಮಿಲಸ್ ಕ್ಯುರಿ ಸುಪ್ರೀಂಕೋರ್ಟ್’ನಲ್ಲಿ ಪ್ರಸ್ತಾಪಿಸಿದ್ದಾರೆ.
ದೇವಸ್ಥಾನದ ಆಡಳಿತದಲ್ಲಿ ಪಾರದರ್ಶಕತೆ ತರಲು ಸುಪ್ರೀಂಕೋರ್ಟ್ ಅಮಿಕಸ್ ಕ್ಯುರಿಯಾಗಿ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂರವರನ್ನು ನೇಮಿಸಿತ್ತು. ವಿಗ್ರಹದ ತಿಲಕ ಭಾಗದಲ್ಲಿರುವ 8 ವಜ್ರಗಳು ಕಾಣೆಯಾಗಿವೆ. ಕ್ರೈಮ್ ಬ್ರಾಂಚ್’ನವರು ತನಿಖೆ ನಡೆಸುತ್ತಿದ್ದಾರೆ ಎಂದು ಗೋಪಾಲ್ ಸುಬ್ರಮಣಿಯಂ ಹೇಳಿದ್ದಾರೆ. ಅವುಗಳ ಅಂದಾಜು ಮೌಲ್ಯ ರೂ. 21 ಲಕ್ಷದಷ್ಟಿದ್ದು, ಪ್ರಾಚೀನವಾದ್ದರಿಂದ ಇನ್ನೂ ಹೆಚ್ಚು ಬೆಲೆಬಾಳುತ್ತದೆ ಎಂದು ಸುಬ್ರಮಣಿಯಂ ಹೇಳಿದ್ದಾರೆ.
ಗರ್ಭಗುಡಿಯಲ್ಲಿರುವ ನೆಲಮಾಳಿಗೆಯಲ್ಲಿ ವಜ್ರಗಳನ್ನು ಇಡಲಾಗಿತ್ತು. ಪ್ರತಿದಿನ ಪೂಜಾ ಸಂದರ್ಭದಲ್ಲಿ ಹೊರ ತೆಗೆಯಲಾಗುತ್ತದೆ. ಈ ಸಂದರ್ಭದಲ್ಲೇ ಕಳೆದು ಹೋಗಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.