ನನ್ನನ್ನು ನೋಡಿ ನಗಬೇಡಿ ಎಂದು ನೂತನ ಸಿಎಂಗೆ ಸ್ಟಾಲಿನ್ ಸಲಹೆ

By Suvarna Web DeskFirst Published Feb 17, 2017, 10:02 AM IST
Highlights

ತಮಿಳುನಾಡು ಮುಖ್ಯಮಂತ್ರಿಯಾಗಿ ಇಡಪ್ಪಾಡಿ ಪಳನಿಸ್ವಾಮಿ 31 ಶಾಸಕರೊಂದಿಗೆ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಶನಿವಾರ ವಿಶ್ವಾಸಮತ ಯಾಚನೆಯಿದ್ದು ಪಳನೀಸ್ವಾಮಿ ಭವಿಷ್ಯ ಅಂತಿಮವಾಗಿ ನಿರ್ಧಾರವಾಗಲಿದೆ.

ನವದೆಹಲಿ (ಫೆ.17): ತಮಿಳುನಾಡು ಮುಖ್ಯಮಂತ್ರಿಯಾಗಿ ಇಡಪ್ಪಾಡಿ ಪಳನಿಸ್ವಾಮಿ 31 ಶಾಸಕರೊಂದಿಗೆ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಶನಿವಾರ ವಿಶ್ವಾಸಮತ ಯಾಚನೆಯಿದ್ದು ಪಳನೀಸ್ವಾಮಿ ಭವಿಷ್ಯ ಅಂತಿಮವಾಗಿ ನಿರ್ಧಾರವಾಗಲಿದೆ.

ಪಳನೀಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ವಿಧಾನ ಸಭೆಗೆ ಪ್ರವೇಶಿಸಿದಾಗ ಕೆಲವು ಮಜವಾದ ಪ್ರಸಂಗಗಳು ನಡೆದವು. ಕೆಲ ದಿನಗಳ ಹಿಂದೆ ವಿಧಾನಸಭೆಯಲ್ಲಿ ಓ ಪನ್ನೀರ್ ಸೆಲ್ವಂ ಸ್ಟಾಲಿನ್ ನೋಡಿ ನಕ್ಕಿದ್ದರು. ಅದು ಶಶಿಕಲಾ ಕಣ್ಣು ಕೆಂಪಾಗುವಂತೆ ಮಾಡಿತ್ತು. ಆ ಕಾರಣಕ್ಕಾಗಿ ಶಶಿಕಲಾ ರಾಜಿನಾಮೆ ಕೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ಪ್ರತಿಯಾಗಿ ಬೇರೆಯವರನ್ನು ನೋಡಿ ಸೌಹಾರ್ದಯುತವಾಗಿ ನಗುವುದು ಪ್ರಾಣಿಗಳಿಂದ ಮನುಷ್ಯರನ್ನು ಬೇರೆ ಮಾಡುತ್ತದೆ ಎಂದು ಪನ್ನೀರ್ ಸೆಲ್ವಂ ಸಮರ್ಥಿಸಿಕೊಂಡಿದ್ದರು. ಇಂದು ಅದೇ ವಿಚಾರವನ್ನು ಸ್ಟಾಲಿನ್ ಪ್ರಸ್ತಾಪಿಸಿ, ಪಳನೀಸ್ವಾಮಿ ಸರ್ಕಾರವು ಜನವಿರೋಧಿಯಾಗಿದ್ದು, ಶಶಿಕಲಾ ಹಾಗೂ ಪಳನೀಸ್ವಾಮಿ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

click me!