ಚಂದ್ರಶೇಖರ್ ನಿಧನ : ಪಾರ್ಥಿವ ಶರೀರ ತರಲು ಕೇಂದ್ರದೊಂದಿಗೆ ಮಾತುಕತೆ

By Suvarna Web DeskFirst Published Jan 27, 2018, 7:24 AM IST
Highlights

ನ್ನಡದ ಹಿರಿಯ ನಟ ಚಂದ್ರಶೇಖರ್​ ವಿಧಿವಶರಾಗಿದ್ದಾರೆ.  ಹೃದಯಾಘಾತದಿಂದ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ನಟ ಚಂದ್ರಶೇಖರ್​ ನಿಧನರಾಗಿದ್ದಾರೆ. 

ಬೆಂಗಳೂರು : ಕನ್ನಡದ ಹಿರಿಯ ನಟ ಚಂದ್ರಶೇಖರ್​ ವಿಧಿವಶರಾಗಿದ್ದಾರೆ.  ಹೃದಯಾಘಾತದಿಂದ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ನಟ ಚಂದ್ರಶೇಖರ್​ ನಿಧನರಾಗಿದ್ದಾರೆ.  ಕೆನಡಾದಲ್ಲಿದ್ದ ಅವರು ಇಂದು ಮುಂಜಾನೆ ನಿಧನರಾಗಿದ್ದು, ಪತ್ನಿ ಶೀಲಾ ಚಂದ್ರಶೇಖರ್ ಹಾಗು ಪುತ್ರಿ ತಾನ್ಯರನ್ನ ಅಗಲಿದ್ದಾರೆ. ಪುಟ್ಟಣ್ಣ ಕಣಗಾಲ್ ಗರಡಿಯಿಂದ ಬಂದಂತ ಪ್ರತಿಭೆಯಾಗಿದ್ದ ಚಂದ್ರಶೇಖರ್ ಇಂದು ಬೆಳಗ್ಗೆ ನಮ್ಮನ್ನಗಲಿದ್ದಾರೆ.

ಕನ್ನಡದ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಚಂದ್ರಶೇಖರ್ ನಟಿಸಿದ್ದರು.  ಕೊನೆಯದಾಗಿ 3ಗಂಟೆ 30 ದಿನ 30 ಸೆಕೆಂಡ್ ಚಿತ್ರದಲ್ಲಿ ನಟನೆ ಮಾಡಿದ್ದರು.

ಕನ್ನಡದ ಹಿರಿಯ ನಟ ಚಂದ್ರ ಶೇಖರ್ ನಿಧನ ಹಿನ್ನೆಲೆ ಅವರ ಮನೆಗೆ ಭೇಟಿ ನೀಡಿರುವ ನಟ ಜೈ ಜಗದೀಶ್, ಸುಂದರ್ ರಾಜ್ ಹಾಗೂ ಶ್ರೀನಾಥ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪಾರ್ಥಿವ ಶರೀರವನ್ನು ಬೆಂಗಳೂರಿಗೆ ರವಾನಿಸಲು ಕೇಂದ್ರ ಸರ್ಕಾರದೊಂದಿಗೆ ಕುಟುಂಬಸ್ಥರು ಮಾತುಕತೆ ನಡೆಸಿದ್ದಾರೆ.

ಇನ್ನು ತಮ್ಮ ತಂದೆಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಪುತ್ರಿ ತಾನ್ಯ  ನಿನ್ನೆ ರಾತ್ರಿಯಷ್ಟೇ ತಂದೆಯೊಂದಿಗೆ ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ.  ರಾತ್ರಿ 10.30ಕ್ಕೆ ಎಂದಿನಂತೆ ಮಾತನಾಡಿದ್ದರು ಎಂದು ಹೇಳಿದ್ದಾರೆ.  ರಾತ್ರಿ 3 ಗಂಟೆಗೆ ನಿಧನದ ಸುದ್ದಿ ಬಂದಿದೆ. 2 ವಾರಗಳ ಹಿಂದೆ ಬೆಂಗಳೂರಿನಲ್ಲೇ ಅಪ್ಪ ಅಮ್ಮ ಇಬ್ಬರು ಇದ್ದರು. ಸತ್ಯನಾರಾಯಣ ಪೂಜೆಯನ್ನು ಮಾಡಿ ಸಂತೋಷವಾಗಿದ್ದೆವು ಎಂದು ಹೇಳಿದ್ದಾರೆ.

click me!