
ಮುಂಬೈ(ಸೆ.25): 9000 ಕೋಟಿ ರು. ಸಾಲದ ಮರುಪಾವತಿ ಮಾಡಲು ತಾವು ಹಲವು ಬಾರಿ ಯತ್ನಿಸಿದರೂ, ಅದಕ್ಕೆ ಸ್ವತಃ ಜಾರಿ ನಿರ್ದೇಶನಾಲಯವೇ (ಇಡಿ) ಅಡ್ಡಿಯಾಗಿತ್ತು ಎಂದು ಉದ್ಯಮಿ ವಿಜಯ್ ಮಲ್ಯ ಆರೋಪಿಸಿದ್ದಾರೆ.
ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕು ಎಂದು ಕೋರಿ ಇಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸೋಮವಾರ ಮಲ್ಯ ಪರ ವಕೀಲರು ಆ ಆರೋಪ ಮಾಡಿದರು.
‘ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ನನ್ನ ಸಾಲದ ಮರುಪಾವತಿಗಾಗಿ ಕಳೆದ ಎರಡು-ಮೂರು ವರ್ಷಗಳಿಂದ ಯತ್ನಿಸುತ್ತಿದ್ದೆ. ಆದರೆ, ಇದಕ್ಕೆ ಅವಕಾಶ ಕಲ್ಪಿಸಿಕೊಡಬೇಕಿದ್ದ ಇಡಿ, ಅದರ ಬದಲು ಹಣ ಪಾವತಿಗೆ ಅಡ್ಡಿ ಮಾಡಿತು ಎಂದು ಮಲ್ಯ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.