400 ವರ್ಷದ ಹಿಂದಿನ ಹಡಗು ಪತ್ತೆ: ಭಾರತದ ‘ಮಸಾಲೆ’ ಇನ್ನೂ ಇದೆ!

By Web DeskFirst Published Sep 25, 2018, 10:16 AM IST
Highlights

400 ವರ್ಷದ ಹಿಂದೆ ಮುಳುಗಿದ್ದ ಹಡಗು ಪತ್ತೆ! ಪೋರ್ಚುಗೀಸ್ ಸಾಗರದಾಳದಲ್ಲಿ ಪತ್ತಯಾದ ಹಡಗು! ಭಾರತದಿಂದ ಮಸಾಲೆ ಪದಾರ್ಥ ಹೊತ್ತು ಹೊರಟಿದ್ದ ಹಡಗು!
ಲಿಸ್ಬಾನ್ ಸಾಗರದಾಳದಲ್ಲಿ ಪತ್ತೆಯಾದ ಹಡಗಿನ ಒಡೆದ ಭಾಗ

ಕಾಸ್ಕಿಯಾಸ್(ಸೆ.25): ಪೋರ್ಚುಗಲ್ ನ ಸಾಗರದಾಳದಲ್ಲಿ ಸುಮಾರು 400 ವಷರ್ಷಗಳ ಹಿಂದೆ ಮುಳುಗಿದ್ದ ಹಡಗೊಂದನ್ನು ಪತ್ತೆ ಹಚ್ಚಲಾಗಿದೆ.

ಇಲ್ಲಿನ ಲಿಸ್ಬಾನ್ ಬಳಿಯ ಸಾಗರದಾಳದಲ್ಲಿ ಈ ಹಡಗು ಪತ್ತೆಯಾಗಿದೆ ಎಂದು ಸಾಗರ ತಜ್ಞರು ತಿಳಿಸಿದ್ದಾರೆ. ಸುಮಾರು 400 ವಷರ್ಷಗಳ ಹಿಂದೆ ಭಾರತದಿಂದ ಮಸಾಲೆ ಪದಾರ್ಥಗಳನ್ನು ಹೊತ್ತು ಸಾಗುತ್ತಿದ್ದ ಈ ಹಡಗು, ಸಾಗರದಲ್ಲಿ ಮುಳುಗಡೆಯಾಗಿತ್ತು ಎನ್ನುತ್ತದೆ ಇತಿಹಾಸ.

ಈ ಹಡಗು ಸಂಪೂರ್ಣವಾಗಿ ಒಡೆದಿದ್ದು, ಅದರ ಒಂದು ಭಾಗವನ್ನು ಮಾತ್ರ ಸದ್ಯ ಪತ್ತೆ ಮಾಡಲಾಗಿದೆ ಎಂದು ಪ್ರಜೊಕ್ಟ್ ಮ್ಯಾನೇಜರ್ ಜಾರ್ಜ್ ಫ್ರಿರರ್ ಮಾಹಿತಿ ನೀಡಿದ್ದಾರೆ.

15ನೇ ಶತಮಾನದಲ್ಲಿ ಪೋರ್ಚುಗಲ್ ಮತ್ತು ಭಾರತದ ನಡುವೆ ಮಸಾಲೆ ಪದಾರ್ಥಗಳ ರಫ್ತು ಮತ್ತು ಆಮದು ವ್ಯಾಪಾರ ಉತ್ತುಂಗದಲ್ಲಿತ್ತು. ದರಂತೆ ಈ ಹಡಗು 1575ರಲ್ಲಿ ಭಾರತದಿಂದ ಮಸಾಲೆ ಪದಾರ್ಥಗಳನ್ನು ಹೊತ್ತು ಪೋರ್ಚುಗಲ್ ಗೆ ಹೊರಟಿತ್ತು.

click me!