ಮೂರು ರಾಜ್ಯಗಳ ಚುನಾವಣೆಯನ್ನು ಮುಂದೂಡಿದ ಆಯೋಗ

By Suvarna Web DeskFirst Published May 22, 2017, 11:45 PM IST
Highlights

ಈ ಹಿಂದೆ ಆಯೋಗ ನಿರ್ಧರಿಸಿದಂತೆ ಜೂನ್ 8 ರಂದು ಚುನಾವಣೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಜೂನ್ 25 ರಂದು ನಡೆಯುವ ರಾಷ್ಟ್ರಪತಿ ಚುನಾವಣೆ ಹಾಗೂ ಜೂನ್ 3 ರಂದು ನಡೆಯುವ ಇವಿಎಂ ರಾಜಕೀಯ ಪ್ರತಿನಿಧಿಗಳೊಂದಿಗೆ ನಡೆಸುವ ಇವಿಎಂ ಪರೀಕ್ಷೆಯ ಸಂಬಂಧ ಚುನಾವಣೆಯನ್ನು ಮುಂದೂಡಲಾಗಿದೆ.

ನವದೆಹಲಿ(ಮೇ.22): ಕೇಂದ್ರ ಚುನಾವಣಾ ಆಯೋಗ ಗುಜರಾತ್, ಪಶ್ಚಿಮ ಬಂಗಾಳ ಹಾಗೂ  ಗೋವಾ ರಾಜ್ಯಗಳ 10 ರಾಜ್ಯಸಭಾ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿದೆ.

ಈ ಹಿಂದೆ ಆಯೋಗ ನಿರ್ಧರಿಸಿದಂತೆ ಜೂನ್ 8 ರಂದು ಚುನಾವಣೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಜೂನ್ 25 ರಂದು ನಡೆಯುವ ರಾಷ್ಟ್ರಪತಿ ಚುನಾವಣೆ ಹಾಗೂ ಜೂನ್ 3 ರಂದು ನಡೆಯುವ ಇವಿಎಂ ರಾಜಕೀಯ ಪ್ರತಿನಿಧಿಗಳೊಂದಿಗೆ ನಡೆಸುವ ಇವಿಎಂ ಪರೀಕ್ಷೆಯ ಸಂಬಂಧ ಚುನಾವಣೆಯನ್ನು ಮುಂದೂಡಲಾಗಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹಾಗೂ ತೃಣಮೂಲ್ ಕಾಂಗ್ರೆಸ್ ಪಕ್ಷದ ನಾಯಕ ಡೇರಿಕ್ ಓಬ್ರಿಯೇನ್ ಅವರ ರಾಜ್ಯಸಬಾ ಸ್ಥಾನ ಜುಲೈ ಹಾಗೂ ಆಗಸ್ಟ್'ನಲ್ಲಿ ಕೊನೆಗೊಳ್ಳಲಿದೆ.

click me!