ಕಂಪಿಸಿದ ಭೂಮಿ : ಜನರಲ್ಲಿ ಆತಂಕ

By Web DeskFirst Published Oct 7, 2018, 1:44 PM IST
Highlights

ಇಷ್ಟು ದಿನಗಳ ಕಾಲ ವಿವಿಧೆಡೆ ಭಾರೀ ಮಳೆ ನೆರೆ ಹಾವಳಿಯಿಂದ ತತ್ತರಿಸಿದ ಜನತೆಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. 
 

ಶ್ರೀನಗರ : ಇಷ್ಟು ದಿನಗಳ ಕಾಲ ವಿವಿಧೆಡೆ ಭಾರೀ ಮಳೆ ನೆರೆ ಹಾವಳಿಯಿಂದ ತತ್ತರಿಸಿದ ಜನತೆಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. 

ಜಮ್ಮು ಕಾಶ್ಮೀರದಲ್ಲಿ ಭಾನುವಾರ ಭೂ ಕಂಪನ ಸಂಭವಿಸಿದೆ. 

4.6ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು ಯಾವುದೇ ರೀತಿಯ ಆಸ್ತಿ ಪಾಸ್ತಿ, ಪ್ರಾಣ ಹಾನಿ ಸಂಭವಿಸಿದ ವರದಿಯಾಗಿಲ್ಲ. 

ಬೆಳಗ್ಗೆ 8 ಗಂಟೆ 9 ನಿಮಿಷಕ್ಕೆ ಭೂಮಿಯ 106 ಕಿ.ಮೀ ಆಳದಲ್ಲಿ  ಕಂಪಿಸಿದೆ.  ಉತ್ತರ ಗಿಲ್ಗಿಟ್ ಪ್ರದೇಶದಲ್ಲಿ  ಭೂ ಕಂಪನವಾಗಿದೆ. 

2005ರಲ್ಲಿ ಇದೇ ಪ್ರದೇಶಲ್ಲಿ ಭಾರೀ ಭೂ ಕಂಪನ ಸಂಭವಿಸಿ 80 ಸಾವಿರ ಜನರು ಮೃತಪಟ್ಟಿದ್ದರು. 

click me!