ಚೇತನ್ ಭಗತ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

Published : Oct 07, 2018, 01:07 PM IST
ಚೇತನ್ ಭಗತ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ಸಾರಾಂಶ

ಇತ್ತೀಚೆಗೆ ನಟಿ ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ, ಸಾಮಾಜಿಕ  ಜಾಲತಾಣಗಳಲ್ಲಿ ಹಲವು ಪತ್ರಕರ್ತೆಯರು, ನಟಿಯರು ತಮಗಾದ ಇಂಥದ್ದೇ ಕರಾಳ ಅನುಭವ ಹಂಚಿಕೊಂಡಿದ್ದಾರೆ. ಈ ವೇಳೆ ಖ್ಯಾತ ಲೇಖಕ ಚೇತನ್ ಭಗತ್ ಹೆಸರು ಕೂಡಾ ಕೇಳಿಬಂದಿದೆ. 

ಮುಂಬೈ: ಹಾಲಿವುಡ್‌ನಲ್ಲಿ ನಡೆದ ‘ಮೀಟೂ’(ನಾನೂ ಸಹ ದೌರ್ಜನ್ಯಕ್ಕೊಳಗಾಗಿದ್ದೇನೆ) ಆಂದೋಲನ ಭಾರತದಲ್ಲೂ ದೊಡ್ಡ ಮಟ್ಟದಲ್ಲಿ ಆರಂಭವಾಗುವ ಸುಳಿವು ಕಂಡಿದೆ. 

ಇತ್ತೀಚೆಗೆ ನಟಿ ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ವಿರುದ್ಧ ಇಂಥದ್ದೇ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ, ಸಾಮಾಜಿಕ  ಜಾಲತಾಣಗಳಲ್ಲಿ ಹಲವು ಪತ್ರಕರ್ತೆಯರು, ನಟಿಯರು ತಮಗಾದ ಇಂಥದ್ದೇ ಕರಾಳ ಅನುಭವ ಹಂಚಿಕೊಂಡಿದ್ದಾರೆ. ಈ ವೇಳೆ ಖ್ಯಾತ ಲೇಖಕ ಚೇತನ್ ಭಗತ್ ಹೆಸರು ಕೂಡಾ ಕೇಳಿಬಂದಿದೆ. 

ಮಹಿಳೆಯೊಬ್ಬರು, ಚೇತನ್ ಭಗತ್ ತಮ್ಮ ಜೊತೆ ಅಸಭ್ಯ ವಾಗಿ ನಡೆದುಕೊಂಡಿದ್ದನ್ನು ವಾಟ್ಸಾಪ್ ಸಂದೇಶದ ದಾಖಲೆ ಸಹಿತ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಶೇಷವೆಂದರೆ ಇದು ಸುದ್ದಿಯಾಗುತ್ತಲೇ ಚೇತನ್ ಭಗತ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. 

ಅಲ್ಲದೆ ಶನಿವಾರ ಕ್ಷಮೆಯನ್ನೂ ಕೋರಿದ್ದಾರೆ. ಜೊತೆಗೆ ತಮ್ಮ ಈ ಕೆಟ್ಟ ಗುಣ ಸ್ವಭಾವದ ಕುರಿತಾಗಿ ತನ್ನ ಪತ್ನಿಗೂ ಕ್ಷಮಾಪಣೆ ಕೋರಿದ್ದೆ. ಅಂದು ನನ್ನ ಕೃತ್ಯದ ಬಗ್ಗೆ ನಾಚಿಕೆಯಾಗಿ, ಮರುಕ ಪಟ್ಟಿದ್ದೇನೆ ಎಂದು ಫೇಸ್‌ಬುಕ್ ಪೇಜ್‌ನಲ್ಲಿ ಲೇಖನ ಬರೆದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನ್ಯಾಯಾಂಗ ಬೆದರಿಸಿ ಶತಮಾನಗಳ ಕಾರ್ತಿಕ ದೀಪ ಸಂಪ್ರದಾಯ ಮುಗಿಸಲು ಡಿಎಂಕೆ ಯತ್ನ ಬಹಿರಂಗ
ಕೇಂದ್ರದಿಂದ MNREGA ಹೆಸರು ಬದಲಾವಣೆ, ಹೊಸ ನಿಯಮಗಳು ಜಾರಿ, ಕೆಲಸದ ಅವಧಿ, ಕನಿಷ್ಟ ವೇತನ ಹೆಚ್ಚಳ, ವಿವರವಾಗಿ ತಿಳಿಯಿರಿ