ಡಿವೈಎಸ್ಪಿ ಗಣಪತಿ ಸಾವು: ಸೆ.1ಕ್ಕೆ ಸುಪ್ರೀಂ ವಿಚಾರಣೆ

By Suvarna Web DeskFirst Published Aug 19, 2017, 10:08 PM IST
Highlights

ಪ್ರಕರಣದವಿಚಾರಣೆಯುನ್ಯಾ. . ಕೆ. ಗೊಯೆಲ್ಮತ್ತುನ್ಯಾ. ಯು.ಯು. ಲಲಿತ್ಅವರಪೀಠದಮುಂದೆಬಂದಿತ್ತು. ಪ್ರತಿವಾದಿಗಳಿಗೆದೂರಿನಪ್ರತಿಒದಗಿಸಲುದೂರುದಾರರಿಗೆಅವಕಾಶ ಮಾಡಿಕೊಟ್ಟನ್ಯಾಯಾಲಯವುಪ್ರಕರಣದವಿಚಾರಣೆಯನ್ನುಮುಂದೂಡಿತು

ನವದೆಹಲಿ(ಆ.19): ಡಿವೈಎಸ್ಪಿ ಗಣಪತಿ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರ ತಂದೆ ಕುಶಾಲಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆ.1ಕ್ಕೆ ನಿಗದಿ ಮಾಡಿದೆ. ಪ್ರಕರಣದ ವಿಚಾರಣೆಯು ನ್ಯಾ. ಎ. ಕೆ. ಗೊಯೆಲ್ ಮತ್ತು ನ್ಯಾ. ಯು.ಯು. ಲಲಿತ್ ಅವರ ಪೀಠದ ಮುಂದೆ ಬಂದಿತ್ತು. ಪ್ರತಿವಾದಿ ಗಳಿಗೆ ದೂರಿನ ಪ್ರತಿ ಒದಗಿಸಲು ದೂರುದಾರರಿಗೆ ಅವಕಾಶ ಮಾಡಿಕೊಟ್ಟ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿತು. ಸಚಿವ ಕೆ.ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಮತ್ತು ಎ.ಎಂ.ಪ್ರಸಾದ್ ಪಾತ್ರವಿದೆ ಎಂದು ಕುಶಾಲಪ್ಪ ಆರೋಪಿಸಿದ್ದಾರೆ.

click me!