ನೆರೆ-ಬರ: ಕೇಂದ್ರದಿಂದ ಮಲತಾಯಿ ಧೋರಣೆ; ಪ್ರತಾಪ್ ಸಿಂಹಗೆ ತಿರುಗೇಟು

By Web DeskFirst Published Oct 31, 2018, 1:54 PM IST
Highlights

ಕೇರಳಗೆ ಪರಿಹಾರ ಘೋಷಣೆ ಮಾಡಿದ ಕೇಂದ್ರ, ಆದರೆ ಕರ್ನಾಟಕಕ್ಕಿನ್ನೂ ಬಂದಿಲ್ಲ ೫೦ ರೂ.| ಬಿಜೆಪಿ, ಕೇಂದ್ರದಿಂದ ಮಲತಾಯಿ ಧೋರಣೆ | ಉಪ-ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆಕ್ರೋಶ

ಬೆಂಗಳೂರು: ಬರ ಮತ್ತು ನೆರೆ ಪರಿಹಾರಕ್ಕಾಗಿ  ಕೇಂದ್ರದ ಬಳಿ ನೆರವು ಕೇಳಿದ್ದೇವೆ  ಕೇರಳಗೆ ಪರಿಹಾರ ಘೋಷಣೆ ಮಾಡಿದ್ದಾರೆ, ಆದ್ರೆ ನಮಗೆ 50 ರೂಪಾಯಿ ಸಹ ಬಂದಿಲ್ಲ, ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆರೆ-ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ, ಕರ್ನಾಟಕದೊಂದಿಗೆ ಮಲತಾಯಿ ಧೋರಣೆ ಮಾಡುತ್ತಿದೆ. ಬಿಜೆಪಿ ರಾಜಕಾರಣ ಮಾಡ್ತಿದೆ, ಎಂದು ಪರಂ ವಾಗ್ದಾಳಿ ನಡೆಸಿದ್ದಾರೆ. ಸಾಲಮನ್ನಾ ಪ್ರಕ್ರಿಯೆ ಆರಂಭವಾಗಿದೆ, ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.   

ಇದೇ ಸಂದರ್ಭದಲ್ಲಿ ಸಂಸದ  ಪ್ರತಾಪ್ ಸಿಂಹರ "ಶ್ವೇತಪತ್ರಕ್ಕೆ' ಪರಂ ತಿರುಗೇಟು ನೀಡಿದ್ದಾರೆ. 

ಕೇಂದ್ರದಿಂದ ಒಂದೇ ಒಂದು ರೂಪಾಯಿ ಹಣ ಕೊಟ್ಟಿಲ್ಲ ಅಂದ್ರೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಯುಪಿಎ ಸರ್ಕಾರ ಕೊಟ್ಟಿತ್ತೋ, ಮೋದಿ ಸರ್ಕಾರ ಕೊಟ್ಟಿತ್ತೋ ಶ್ವೇತಪತ್ರ ಹೊರಡಿಸಲಿ ಎಂದಿದ್ದ ಪ್ರತಾಪ್ ಸಿಂಹಗೆ,  ಹಾಗಿದ್ರೆ ಶ್ವೇತ್ರ ಪತ್ರವನ್ನ ಅವರೇ ಹೊರಡಿಸಲಿ ಯಾವ ಸರ್ಕಾರ ಎಷ್ಟು ಕೊಟ್ಟಿದೆ ಅಂತ ಗೊತ್ತಾಗುತ್ತೆ
 ಎಂದು ಪರಮೇಶ್ವರ್ ಸವಾಲೆಸೆದಿದ್ದಾರೆ.

click me!