ಅನಂತ್‌ ಕುಮಾರ್ ಖಾತೆಗಳು ರಾಜ್ಯದ ಇಬ್ಬರಿಗೆ

Published : Jun 01, 2019, 07:18 AM IST
ಅನಂತ್‌ ಕುಮಾರ್ ಖಾತೆಗಳು ರಾಜ್ಯದ ಇಬ್ಬರಿಗೆ

ಸಾರಾಂಶ

ರಾಜ್ಯದ ಇಬ್ಬರು ನಾಯಕರು ಪ್ರಧಾನಿ ಮೋದಿ ಸಂಪುಟದಲ್ಲಿ ಸೇರ್ಪಡೆಯಾಗಿದ್ದು ಈ ಹಿಂದೆ ಅನಂತ್ ಕುಮಾರ್ ನಿರ್ವಹಿಸುತಿದ್ದ ಖಾತೆಗಳನ್ನು ಇಬ್ಬರಿಗೆ ಹಂಚಲಾಗಿದೆ.

ನವದೆಹಲಿ : ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಅನಂತ್ ಕುಮಾರ್ ಅವರು ನಿರ್ವಹಿಸಿದ ಖಾತೆಗಳನ್ನು ಇಬ್ಬರು ರಾಜ್ಯದ ನಾಯಕರಿಗೆ ಹಂಚಲಾಗಿದೆ. ಡಿ.ವಿ.ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರಿಗೆ ನೀಡಲಾಗಿದೆ.

ಸದಾನಂದಗೌಡಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ 

ಕೇಂದ್ರ ಸಂಪುಟದಲ್ಲಿ 5ನೆಯವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿದೆ. ಕೃಷಿ ಚಟುವಟಿಕೆ ಸಂಬಂಧ ಮಹತ್ವದ ಖಾತೆ ಇದು. ಅಲ್ಲದೆ, ಔಷಧ ದರ ನಿಯಂತ್ರಣವೂ ಇದೇ ಖಾತೆಯಲ್ಲಿರುತ್ತದೆ. ಹಿಂದೆ ಈ ಖಾತೆಗಳನ್ನು ನಿರ್ವಹಿಸಿದ್ದ ಅನಂತ್‌ ಕುಮಾರ್‌ ಜನೌಷಧ ಸೇರಿ ಹಲವು ಜನೋಪಕಾರಿ ಕ್ರಮ ಕೈಗೊಂಡದ್ದು ಗಮನಾರ್ಹ.

ಪ್ರಹ್ಲಾದ್‌ ಜೋಶಿಗೆ ಸಂಸದೀಯ ವ್ಯವಹಾರ

ಸತತ 4ನೇ ಸಲ ಗೆದ್ದು ಇದೀಗ ಕೇಂದ್ರದಲ್ಲಿ ಸಂಪುಟ ದರ್ಜೆಯ ಸಚಿವರಾಗಿರುವ ಧಾರವಾಡ ಸಂಸದ ಪ್ರಹ್ಲಾದ್‌ ಜೋಶಿಗೆ 3 ಮಹತ್ವದ ಖಾತೆ ದೊರೆತಿದೆ. ಹಿಂದೆ ಕನ್ನಡಿಗರೇ ಆದ ಅನಂತ್‌ ಕುಮಾರ್‌ ನಿರ್ವಹಿಸುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆ ಜೊತೆಗೆ ಕಲ್ಲಿದ್ದಲು, ಗಣಿ ಖಾತೆ ಜೋಶಿಗೆ ಸಿಕ್ಕಿದೆ. ಹಿಂದಿನ ಸರ್ಕಾರದಲ್ಲಿ ಪಿಯೂಷ್‌ ಗೋಯಲ್‌ ಕಲ್ಲಿದ್ದಲು, ನರೇಂದ್ರ ಸಿಂಗ್‌ ತೋಮರ್‌ ಗಣಿ ಖಾತೆ ನಿರ್ವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ