ದುನಿಯಾ ವಿಜಿಗೆ ಜಾಮೀನು

First Published Jun 8, 2018, 3:32 PM IST
Highlights

ರಾಮನಗರ ಜೆಎಂಎಫ್'ಸಿ ನ್ಯಾಯಾಲಯ ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಿ ಬಂಧನದ ಆದೇಶ ಹೊರಡಿಸಿತ್ತು. ಸುಂದರ್ ಪಿ. ಗೌಡ ಅವರನ್ನು ಬಂಧಿಸಲು ತೆರಳಿದಾಗ ದುನಿಯಾ ವಿಜಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

ಬೆಂಗಳೂರು[ಜೂ.08]: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದಲ್ಲಿ ನಟ ದುನಿಯಾ ವಿಜಿಗೆ ನಿರೀಕ್ಷಣ ಜಾಮೀನು ದೊರೆತಿದೆ.
ಜಾಮೀನು ನೀಡಿರುವ ಬೆಂಗಳೂರಿನ 65ನೇ ಸೆಷನ್ಸ್ ಕೋರ್ಟ್ ಒಂದು ಲಕ್ಷ ರೂ. ಬಾಂಡ್ ಹಾಗೂ ಸಾಕ್ಷಿ ನಾಶಪಡಸದಂತೆ ಷರತ್ತು ವಿಧಿಸಿದೆ. ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಆರೋಪಿ ನಿರ್ಮಾಪಕ ಸುಂದರ್ ಗೌಡ ಅವರಿಗೆ ತಪ್ಪಿಸಿಕೊಳ್ಳಲು ನೆರವು ನೀಡಿದ ಆರೋಪ ದುನಿಯಾ ವಿಜಿ ಅವರ ಮೇಲಿತ್ತು.

ರಾಮನಗರ ಜೆಎಂಎಫ್'ಸಿ ನ್ಯಾಯಾಲಯದ ಆದೇಶದ ಮೇರೆಗೆ  ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಪೊಲೀಸರು ವಾರಂಟ್ ಜಾರಿಗೊಳಿಸಿದ್ದರು.  ಕಳೆದ ಮಂಗಳವಾರದಿಂದ ದುನಿಯಾ ವಿಜಿ ತಲೆ ಮರೆಸಿಕೊಂಡಿದ್ದರು. ಒಂದೂವರೆ ವರ್ಷದ ಹಿಂದೆ ಬೆಂಗಳೂರಿನ ಹೊರವಲಯದ ತಿಪ್ಪಗೊಂಡನಹಳ್ಳಿ ಸಮೀಪ ಮಾಸ್ತಿಗುಡಿ ಚಿತ್ರೀಕರಣ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು ಸಹ ಕಲಾವಿದರು ಮೃತಪಟ್ಟಿದ್ದರು. 

click me!