ಮುಂಬೈ ದಾಳಿ ಗೆದ್ದ ಅಭಿನವ್‌ ಲಂಕಾದಲ್ಲೂ ಬಚಾವ್!

Published : Apr 29, 2019, 10:10 AM IST
ಮುಂಬೈ ದಾಳಿ ಗೆದ್ದ ಅಭಿನವ್‌ ಲಂಕಾದಲ್ಲೂ ಬಚಾವ್!

ಸಾರಾಂಶ

ಲಂಕಾ ದಾಳಿ ಗೆದ್ದ ಅಭಿನವ್‌ ಮುಂಬೈನಲ್ಲೂ ಬಚಾವ್‌!| ಲಂಕಾ ದಾಳಿಯಿಂದ ಅಭಿನವ್‌, ನವರೂಪ್‌ ದಂಪತಿ ಪಾರು| ದಾಳಿ ಭೀಕರತೆ ನೆನೆದು ಆಕ್ರೋಶ ವ್ಯಕ್ತಪಡಿಸಿದ ಭಾರತೀಯ

ದುಬೈ[ಏ.29]: ಅವರು ದುಬೈನಿಂದ ಹೊರದೇಶಗಳಿಗೆ ಹೋಗಿದ್ದೇ ಎರಡು ಬಾರಿ. ದುರಾದೃಷ್ಟವೆಂದರೆ ಎರಡೂ ಬಾರಿ ಅವರು ಹೋದ ಪ್ರದೇಶಗಳಲ್ಲಿ ಭಾರೀ ಅನಾಹುತವೇ ಸಂಭವಿಸಿತ್ತು. ಅದರೆ ಇವರ ಪಾಲಿಗೆ ಮಾತ್ರ ಅದೃಷ್ಟನೆಟ್ಟಗಿತ್ತು. ಹೀಗಾಗಿ 2 ಭಯೋತ್ಪಾದಕ ದಾಳಿಯನ್ನು ಇವರು ಗೆದ್ದುಬಂದರು.

ಇದು ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಅಭಿನವ್‌ ಮತ್ತು ನವರೂಪ್‌ ದಂಪತಿ ಕಥೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ದಾಳಿ ವೇಳೆ ಅಭಿನವ್‌ ಮತ್ತು ನವರೂಪ್‌, ದಾಳಿಗೆ ತುತ್ತಾದ ಸಿನ್ನಮೋನ್‌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅಂದು ಈಸ್ಟರ್‌ ಪ್ರಾರ್ಥನೆ ಇದ್ದ ಕಾರಣ ಅಭಿನವ್‌ ಚಚ್‌ರ್‍ಗೆ ತೆರಳಿ, ಅಲ್ಲಿಂದ ಉಪಾಹಾರಕ್ಕೆಂದು ಸಿನ್ನಮೋನ್‌ ಹೋಟೆಲ್‌ಗೆ ಆಗಮಿಸ್ದಿ$್ದರು. ಅಷ್ಟರಲ್ಲಿ ಅಲ್ಲಿ ಸ್ಫೋಟ ಸಂಭವಿಸಿ ಹಲವರು ಸಾವನ್ನಪ್ಪಿದರು.

ಇನ್ನು 2008ರಲ್ಲಿ ಮುಂಬೈಗೆ ಅಭಿನವ್‌ ಆಗಮಿಸಿದ್ದ ವೇಳೆಯಲ್ಲೇ, ಪಾಕಿಸ್ತಾನದ ಮೂಲದ ಉಗ್ರರು ದಾಳಿ ನಡೆಸಿ 270ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?