ಡ್ರಗ್ಸ್ ಅಮಲಿನಲ್ಲಿ ನಟ - ನಟಿಯರು :ಸ್ಫೋಟಕ ಮಾಹಿತಿ

By Web DeskFirst Published Jul 29, 2018, 8:48 AM IST
Highlights

ಯುವ ಜನಾಂಗವನ್ನೇ ಗುರಿಯಾಗಿಸಿಕೊಂಡು ತನ್ನ ವಿಷ ವರ್ತುಲದಲ್ಲಿ ಸೆಳೆದುಕೊಳ್ಳುವ ಡ್ರಗ್ಸ್ ಮಾಯೆ ಬಣ್ಣದ ಮತ್ತು ಫ್ಯಾಷನ್ ಜಗತ್ತಿನಲ್ಲಿಯೂ ಆವರಿಸಿಕೊಂಡಿದ್ದು, ಈ ಮತ್ತಿನ ಬಲೆ ಯಲ್ಲಿ ಹಲವು ರೂಪದರ್ಶಿಯರು, ಚಿತ್ರೋದ್ಯಮದವರು ಸಿಲುಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಬೆಂಗಳೂರು :  ಯುವ ಜನಾಂಗವನ್ನೇ ಗುರಿಯಾಗಿಸಿಕೊಂಡು ತನ್ನ ವಿಷ ವರ್ತುಲದಲ್ಲಿ ಸೆಳೆದುಕೊಳ್ಳುವ ಡ್ರಗ್ಸ್ ಮಾಯೆ ಬಣ್ಣದ ಮತ್ತು ಫ್ಯಾಷನ್ ಜಗತ್ತಿನಲ್ಲಿಯೂ ಆವರಿಸಿಕೊಂಡಿದ್ದು, ಈ ಮತ್ತಿನ ಬಲೆ ಯಲ್ಲಿ ಹಲವು ರೂಪದರ್ಶಿಯರು, ಚಿತ್ರೋದ್ಯಮದವರು ಸಿಲುಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪ್ರತಿ ಕ್ಷೇತ್ರದಲ್ಲಿಯೂ ಪಾರುಪತ್ಯ ಮೆರೆ ಯಲು ಹಾತೊರೆಯುತ್ತಿರುವ ಮಾದಕ ವಸ್ತು ಮಾರಾಟ ಜಾಲ ಸ್ಯಾಂಡಲ್‌ವುಡ್, ಮಾಡೆಲಿಂಗ್, ಫ್ಯಾಷನ್ ಲೋಕದಲ್ಲಿಯೂ ತನ್ನ ಅಸ್ತಿತ್ವದ ಬೇರು ಪಸರಿಸಿವೆ. ಟಾಲಿವುಡ್, ಬಾಲಿವುಡ್, ಕಾಲಿವುಡ್‌ನಷ್ಟು ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದ ಹಿಡಿತದಲ್ಲಿಲ್ಲ. ಹಾಗಂತ ಕನ್ನಡ ಚಿತ್ರರಂಗ ಮಾದಕ ವಸ್ತು ಮಾರಾಟ ಜಾಲದಿಂದ ದೂರ ಉಳಿದಿಲ್ಲ. ಚಿತ್ರೋದ್ಯಮದ
ನಟ-ನಟಿಯರು, ಸಹನಟರು ಸೇರಿದಂತೆ ಕ್ಷೇತ್ರದ ಹಲವು ಮಂದಿ ಡ್ರಗ್ಸ್ ಸೆಳೆತದಲ್ಲಿದ್ದಾರೆ.

ಆದರೆ, ವ್ಯಸನಿಗಳಾಗುವ ಆತಂಕದಲ್ಲಿ ಮಾಫಿಯಾದಿಂದ ಕೊಂಚ ದೂರ ಉಳಿದಿದ್ದಾರೆ ಎನ್ನುವುದು ಚಿತ್ರರಂಗದ ವಾದ. ಬಣ್ಣದ ಲೋಕದಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಟಾಲಿವುಡ್ ಅಗ್ರಸ್ಥಾನ ಎಂಬುದು ಚಿತ್ರರಂಗದ ಅಭಿಮತ. ನಂತರ ಬಾಲಿವುಡ್, ಕಾಲಿವುಡ್ ಸ್ಥಾನ ಪಡೆದುಕೊಂಡಿವೆ. ಸ್ಯಾಂಡಲ್‌ವುಡ್‌ನಲ್ಲಿ ಶೇ.20 - 30 ರಷ್ಟು ಮಾಫಿಯಾದ ಮೋಹ ಕಾಣಸಿಗುತ್ತದೆ.

ಕನ್ನಡ ಚಿತ್ರರಂಗದಿಂದ ಅನ್ಯಭಾಷೆಗೆ ಹಾರಿದವರು ಈ ಮೋಹದ ಜಾಲದಲ್ಲಿ ಸಿಲುಕಿರುವ ಉದಾಹರಣೆಗಳಿವೆ ಎಂಬ ಮಾತುಗಳು ಕೇಳಿಬಂದಿವೆ. ಸಿನಿಮಾ, ಮಾಡೆಲಿಂಗ್, ಫ್ಯಾಷನ್ ಜಗತ್ತಿನಲ್ಲಿರುವವರು ಮಾದಕವಸ್ತುಗಳ ಸೆಳೆತಕ್ಕೊಳಗಾಗುವುದಕ್ಕೆ  ಸಿಗರೇಟೇ ಮೂಲ ಕಾರಣ. ಸಿಗರೇಟು ಅಭ್ಯಾಸದಿಂದ ಹಂತಹಂತವಾಗಿ ಅಫೀಮು, ಹೆರಾಯಿನ್, ಕೊಕೇನ್, ಕ್ಯಾನಬೀಸ್, ಸೆಡೆಟಿವ್ ನಂತಹ ಮಾದಕವಸ್ತುಗಳ ವ್ಯಸನಿಗಳಾಗುತ್ತಾರೆ.

ಬಣ್ಣದ ಲೋಕದಲ್ಲಿ ಖ್ಯಾತಿ ಪಡೆಯುವ ಹುಚ್ಚಿನಿಂದಾಗಿ ಕೆಲವರ ಕಪಿಮುಷ್ಟಿಯಲ್ಲಿ ಸಿಲುಕಿ ಕೆಲವರು ಅನಿವಾರ್ಯ ಕಾರಣಗಳಿಂದಾಗಿ ಡ್ರಗ್ಸ್ ಸೇವನೆ ಮಾಡಲು ಆರಂಭಿಸುತ್ತಾರೆ. ಇನ್ನು ಕೆಲವರು ಆಧುನಿಕ ಜೀವನದಲ್ಲಿ ಮೋಜು-ಮಸ್ತಿಯಿಂದ ಕಾಲ ಕಳೆಯಬೇಕು ಎಂಬ ಭಾವನೆಯಲ್ಲಿಯೂ ಇದರ ದಾಸರಾಗುತ್ತಾರೆ ಎಂಬುದು ಮನೋವೈದ್ಯರ ಅಭಿಪ್ರಾಯವಾಗಿದೆ.  

ಒತ್ತಡದಿಂದ ದೂರವಾಗಲು ಡ್ರಗ್ಸ್ ದಾಸರು: ಯಾವುದೇ ಕ್ಷೇತ್ರದಲ್ಲಿ ಗುರಿ ಸಾಧಿಸಿ ಖ್ಯಾತಿ ಪಡೆಯಬೇಕು ಎಂಬ ಹಂಬಲ ಇರಬೇಕು. ಆದರೆ, ಖ್ಯಾತಿಯ ಮೋಹಕ್ಕೆ ಬೀಳಬಾರದು. ಬಣ್ಣದ ಲೋಕದಲ್ಲಿ ನಡೆಯುತ್ತಿರುವುದು ಇದೇ ಮನೋಭಾವ. ಖ್ಯಾತಿಯ ಮೋಹಕ್ಕೆ ಬಿದ್ದು ಒತ್ತಡಕ್ಕೊಳಗಾಗಿ ಮಾದಕ ವ್ಯಸನಿಗಳಾಗುತ್ತಾರೆ. ಮತ್ತಷ್ಟು ಮಂದಿ ತಮ್ಮ ಖ್ಯಾತಿ ದಿಢೀರ್ ಕುಸಿದರೆ ಮನಸ್ಸಿನ ತೊಳಲಾಟಕ್ಕೆ ಸಿಲುಕಿ ಇಲ್ಲದ ಒತ್ತಡಕ್ಕೊ ಳಗಾಗುತ್ತಾರೆ. ಇದರಿಂದ ದೂರವಾಗಲು ಮಾದಕ ವಸ್ತುಗಳ ದಾಸರಾಗುತ್ತಾರೆ. 

click me!