ಇದಕ್ಕಾಗಿಯೇ ಈ ಹುಡ್ಗೀರಿಗೆ ಬಾಯ್ ಫ್ರೆಂಡ್ ಬೇಕು..!

Published : Aug 11, 2018, 03:29 PM ISTUpdated : Sep 09, 2018, 08:57 PM IST
ಇದಕ್ಕಾಗಿಯೇ ಈ ಹುಡ್ಗೀರಿಗೆ ಬಾಯ್ ಫ್ರೆಂಡ್ ಬೇಕು..!

ಸಾರಾಂಶ

ಈ ಹುಡುಗಿಯರು ಬಾಯ್ ಫ್ರೆಂಡ್ ಮಾಡಿಕೊಳ್ಳುವುದೇ ಇದಕ್ಕಾಗಿ. ಈ ವಿಚಾರವು ಬೆಚ್ಚಿ ಬೀಳಿಸುವಂತಿದೆ. ಸುಲಭವಾಗಿ ಡ್ರಗ್ ಪಡೆಯುವ ಸಲುವಾಗಿಯೇ ಅದರ ಚಟ ಹತ್ತಿಸಿಕೊಂಡು ಬಿಡಲಾಗದೇ ಬಾಯ್ ಫ್ರೆಂಡ್ ಗಳನ್ನು ಮಾಡಿಕೊಳ್ಳುತ್ತಿದ್ದಾರೆ. 

ಬೆಂಗಳೂರು :  ಮಾದಕ ವಸ್ತುಗಳ ವಿಷದ ಸುಳಿಗೆ ಸಿಲುಕುವ ಯುವತಿಯರು ಡ್ರಗ್ಸ್‌ಗಾಗಿಯೇ ಮಾಡಿಕೊಳ್ಳುತ್ತಾರೆ ಬಾಯ್‌ಫ್ರೆಂಡ್ಸ್..! ಹೌದು, ಆಧುನಿಕತೆಯ ಜೀವನಶೈಲಿಯ ಮೋಹದ ಬಲೆಗೆ ಸಿಕ್ಕಿಬಿದ್ದು ಯುವಕರಿಗೆ ಸರಿಸಾಟಿ
ಯಾಗಿ ಯುವತಿಯರು ಡ್ರಗ್ಸ್ ದಾಸರಾಗುತ್ತಿರುವ ಪ್ರಮಾಣ ದಿನೇದಿನೇ ಅಧಿಕವಾಗುತ್ತಿದೆ. ಮಾದಕ ವಸ್ತುಗಳನ್ನು ಪಡೆದುಕೊಳ್ಳಲೆಂದೇ ಯುವತಿಯರು ಬಾಯ್‌ಫ್ರೆಂಡ್‌ಗಳನ್ನು ಮಾಡಿಕೊಂಡು, ಡ್ರಗ್ಸ್ ಸರಬರಾಜು ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯದ  ಯುವತಿಯರು ಅದರಲ್ಲೂ ಗ್ರಾಮೀಣ ಭಾಗದವರು ಮಾದಕ ವಸ್ತು ಮಾರಾಟ ಜಾಲದಲ್ಲಿ ಸಿಲುಕುತ್ತಿರುವುದಕ್ಕೆ ಉತ್ತರ ಭಾರತದ ಗೆಳೆಯ-ಗೆಳತಿಯರ ಸಹವಾಸವೇ ಹೆಚ್ಚು ಕಾರಣ ಎಂಬ ಆತಂಕಕಾರಿ ಅಂಶ ಗೊತ್ತಾಗಿದೆ.
ಅಚ್ಚರಿಯ ವಿಷಯವೆಂದರೆ ಇತ್ತೀಚೆಗೆ ಡ್ರಗ್ಸ್ ಸೇವನೆಗೊಳಗಾಗುತ್ತಿರುವವರ ಪೈಕಿ ಉತ್ತಮ ಸಂಸ್ಕಾರ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ಯುವತಿಯರೇ ಹೆಚ್ಚಾಗುತ್ತಿದ್ದಾರೆ. ನಗರದ ಐಟಿ-ಬಿಟಿ ಸೇರಿದಂತೆ ವಿದೇಶಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಯುವತಿಯರು ಡ್ರಗ್ಸ್‌ನ ಮಾಯೆಯ ಸುಳಿಯಲ್ಲಿ ಸಿಲುಕುತ್ತಿದ್ದಾರೆ. 

ಆರಂಭದಲ್ಲಿ ಗೆಳತಿಯರ ಮೂಲಕ ಮಾದಕ ವಸ್ತು ಗಳನ್ನು ಸೇವಿಸುವ ಯುವತಿಯರು ಕ್ರಮೇಣ ವ್ಯಸನಿ ಗಳಾಗುತ್ತಿದ್ದಾರೆ. ಡ್ರಗ್ಸ್ ಚಟ ಹತ್ತಿದ ಬಳಿಕ ಅದನ್ನು ಪಡೆಯಲೆಂದೇ ಯುವತಿಯರು ಬಾಯ್‌ಫ್ರೆಂಡ್ ಗಳನ್ನು ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಡ್ರಗ್ಸ್ ಮಾಫಿಯಾ ತನ್ನ ಕಂಬಂಧ ಬಾಹು ವಿಸ್ತರಣೆಯನ್ನು ತನ್ನದೇ ಜಾಲದ ಮೂಲಕ ಮಾಡುತ್ತದೆ. ಅಷ್ಟು ಸುಲಭವಾಗಿ ಯುವತಿಯರ ಕೈಗೆ ಮಾದಕ ವಸ್ತುಗಳು ಸಿಗುವುದಿಲ್ಲ. ಅದೇನಿದ್ದರೂ
ಹುಡುಗರ ಮೂಲಕವೇ ಸರಬರಾಜು ಮಾಡಲಾಗುತ್ತದೆ. ಹುಡುಗರ ಮೂಲಕ ಸುಲಭವಾಗಿ ಪಡೆದುಕೊಳ್ಳ ಬಹುದು ಎಂಬ ಕಾರಣಕ್ಕಾಗಿ ಬಾಯ್‌ಫ್ರೆಂಡ್‌ಗಳನ್ನು ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಮಾದಕ ವಸ್ತುಗಳನ್ನು ತರಿಸಿಕೊಂಡು ಸೇವನೆ ಮಾಡುತ್ತಾರೆ. 

ನಗರದ ಪಿಜಿ ಕೇಂದ್ರಗಳಲ್ಲಿ ನೆಲೆಸಿರುವ ಹಾಗೂ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪೈಕಿ ಉತ್ತರ ಭಾರತದ ಯವತಿಯರು ಬಹುತೇಕ ಆಧುನಿಕ ಜೀವನ ಶೈಲಿಯನ್ನು ರೂಢಿಸಿಕೊಂಡಿರುತ್ತಾರೆ. ಸಿಗರೇಟು, ಮದ್ಯ, ಮಾದಕ ವಸ್ತುಗಳ ಸೇವನೆ ಸಹವಾಸಕ್ಕೆ ಬಿದ್ದಿರುತ್ತಾರೆ. ಅವರ ಸಹವಾಸದಿಂದ ರಾಜ್ಯದ ಯುವತಿಯರು ಸಹ ಮಾದಕ ವಸ್ತುಗಳ ಜಾಲದೊಳಗೆ ಸಿಲುಕುತ್ತಿದ್ದಾರೆ. ಗ್ರಾಮೀಣ ಭಾಗ ದಿಂದ ಬಂದಂತಹ ಯುವತಿಯರು ಉತ್ತರ ಭಾರತದ
ಗೆಳೆಯರ ಸಹವಾಸದಿಂದ ಹಾಳಾಗುತ್ತಿದ್ದಾರೆ. ಇಂತಹ ಹಲವು ಉದಾಹರಣೆಗಳನ್ನು ಪುನರ್ವಸತಿ ಕೇಂದ್ರಗಳಲ್ಲಿ ಕಾಣಬಹುದಾಗಿದೆ. ಆರಂಭದಲ್ಲಿ ರುಚಿಗಾಗಿ ಅದರ ಮೋಹಕ್ಕೆ ಬಿದ್ದವರು ಕ್ರಮೇಣ ದಾಸರಾಗುತ್ತಾರೆ. 

ಪುನರ್ವಸತಿ ಕೇಂದ್ರಗಳ ಮಾಹಿತಿ ಪ್ರಕಾರ ಶಿಕ್ಷಣದ ಹಂತದಲ್ಲಿ ಮಾದಕ ವಸ್ತುಗಳ ವ್ಯಸನಿಯಾಗುವುದು ಒಂದು ಕಡೆಯಾದರೆ, ಹಲವು ಯುವತಿಯರು ಉತ್ತಮ ವಿದ್ಯಾಭ್ಯಾಸ ಮಾಡಿ ನಗರ ಪ್ರದೇಶದಲ್ಲಿ ಉದ್ಯೋಗ ಅರಸಿ ಬಂದ ಬಳಿಕ ಡ್ರಗ್ಸ್ ದಾಸರಾಗುವುದು ಮತ್ತೊಂದು ಭಾಗವಾಗಿದೆ. ಬೆಂಗಳೂರು ಮಾತ್ರವಲ್ಲದೇ, ಮೈಸೂರು, ಹುಬ್ಬಳ್ಳಿ- ಧಾರವಾಡದಂತಹ ನಗರ ಪ್ರದೇಶದಲ್ಲಿ ಐಟಿ-ಬಿಟಿ ಕಂಪನಿಗಳ ಜತೆಗೆ ವಿದೇಶಿ ಕಂಪನಿಗಳು ಹೆಚ್ಚಾಗಿವೆ. ಪಬ್, ಕ್ಲಬ್‌ಗಳು ಸಹ ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಕೈತುಂಬಾ ವೇತನ ಪಡೆಯುವ ಯುವತಿಯರು ಅದನ್ನು ಹೇಗೆ ಖರ್ಚು ಮಾಡಬೇಕು ಎಂಬುದು ತಿಳಿಯದೆ ಇಂತಹ ದಾರಿ ತುಳಿಯುತ್ತಾರೆ ಎಂದು ಮೂಲಗಳು ತಿಳಿಸಿವೆ. 

ಗ್ರಾಮೀಣ ಭಾಗದಿಂದ ಆಗಮಿಸಿದ ಯುವತಿ ಯೊಬ್ಬಳು ಡಗ್ಸ್ ಮಾಯೆಗೆ ಸಿಲುಕಿ ಸ್ವಗ್ರಾಮಕ್ಕೆ ಹಿಂತಿರುಗಲು ಇಚ್ಛಿಸದೆ ಮಾದಕ ವಸ್ತುಗಳ ವ್ಯಸನಿ ಯಾಗಿ ಅನಾರೋಗ್ಯಕ್ಕೊಳಗಾಗಿದ್ದಳು. ಡ್ರಗ್ಸ್ ಸಿಗದಿ ದ್ದಾಗ ಚಡಪಡಿಸುತ್ತಿದ್ದ ಆಕೆ ಕೆಲಸ ಕಳೆದುಕೊಂಡು ಹಣಕ್ಕಾಗಿ ಯಾವ ಕೆಲಸಕ್ಕಾದರೂ ಸಿದ್ಧಳಾಗಿದ್ದಳು. ಆಕೆಯನ್ನು ಡ್ರಗ್ಸ್ ಮಾಫಿಯಾ ತನ್ನ ಕೆಲಸಕ್ಕಾಗಿ ಬಳಸಿಕೊಂಡಿತ್ತು. ಅದೃಷ್ಟವಶಾತ್ ಪರಿಚಯಸ್ಥರ ಕಣ್ಣಿಗೆ ಬಿದ್ದ ಯುವತಿಯು ತನ್ನ ಸ್ಥಿತಿ ಹೇಳಿಕೊಂಡಾಗ
ಪುನರ್ವಸತಿಗೆ ಸೇರಿಸಲಾಯಿತು. ಒಂದು ವರ್ಷಕ್ಕೂ ಅಧಿಕ ಕಾಲ ಚಿಕಿತ್ಸೆ ಪಡೆದು ಗುಣಮುಖಳಾದ ಬಳಿಕ ನಗರದ ಸಹವಾಸವನ್ನೇ ಬಿಟ್ಟು ಸ್ವಗ್ರಾಮಕ್ಕೆ ತೆರಳಿದ್ದಾಳೆ. ಇಂತಹ ಹಲವು ಉದಾಹರಣೆಗಳು ಪುನರ್ವಸತಿ ಕೇಂದ್ರದಲ್ಲಿ ಸಿಗುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ