ನಾಸಾ ಪಾರ್ಕರ್ ಪ್ರೋಬ್ ಉಡಾವಣೆ ಮುಂದೂಡಿಕೆ! ತಾಂತ್ರಿಕ ದೋಷದಿಂದ ಉಡಾವಣೆ ಮೂಂದೂಡಿದ ನಾಸಾ! ಸೂರ್ಯನ ಅಧ್ಯಯನಕ್ಕೆ ಸಜ್ಜಾಗಿದ್ದ ನೌಕೆಯಲ್ಲಿ ದೋಷ! ಭಾನುವಾರ ಉಡಾವಣೆಗೆ ಸಿದ್ಧತೆ ಮಾಡಿಕೊಂಡ ನಾಸಾ
ವಾಷಿಂಗ್ಟನ್(ಆ.11): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ನಾಸಾದ ಪಾರ್ಕರ್ ಪ್ರೋಬ್ ಯೋಜನೆಯನ್ನು ಭಾನುವಾರಕ್ಕೆ ಮುಂದೂಡಲಾಗಿದೆ.
ಸೂರ್ಯನ ಅಧ್ಯಯನಕ್ಕೆ ಸಿದ್ಧಪಡಿಸಲಾದ ಪಾರ್ಕರ್ ನೌಕೆಯ ಉಡಾವಣೆಯನ್ನು ಕೊನೆ ಗಳಿಗೆಯಲ್ಲಿ ನಾಸಾ ಮೂಂದೂಡಿರುವುದು ವಿಶ್ವವನ್ನು ಬೆರಗುಗೊಳಿಸಿದೆ. ಇದಕ್ಕೆ ಕಾರಣವನ್ನೂ ನೀಡಿರುವ ನಾಸಾ, ಕೊನೆ ಗಳಿಗೆಯಲ್ಲಿ ಇಂಜಿನಿಯರಿಂಗ್ ವಿಭಾಗ 'ರೆಡ್ ಫ್ಲ್ಯಾಗ್' ತೋರಿಸಿದ್ದರಿಂದ ಉಡಾವಣೆಯನ್ನು ರದ್ದುಗೊಳಿಸಲಾಯಿರತು ಎಂದು ಸ್ಪಷ್ಟಪಡಿಸಿದೆ.
ನೌಕೆಯ ತಾಂತ್ರಿಕ ವಿಭಾಗ ಕೊನೆ ಹಂತದಲ್ಲಿ ಹಲವು ದೋಷಗಳನ್ನು ಗುರುತಿಸಿದ್ದು, ಇದರಿಂದ ಉಡಾವಣೆಯನ್ನು ರದ್ದುಗೊಳಿಸಬೇಕಾಯಿತು ಎಂದು ನಾಸಾ ತಿಳಿಸಿದೆ. ಪ್ರಮುಖವಾಗಿ ನೌಕೆಯ ಒಳಭಾಗದಲ್ಲಿ ಅತೀಯಾದ ಹಿಲಿಯಂ ಒತ್ತಡ ಕಂಡು ಬಂದ ಕಾರಣ ಮುಂದಾಗಬಹುದಾದದ ಅನಾಹುತವನ್ನು ಗಮನದಲ್ಲಿಟ್ಟುಕೊಂಡು ಉಡಾವಣೆಯನ್ನು ಮುಂದೂಲಾಗಿದೆ ಎನ್ನಲಾಗಿದೆ.
This morning’s launch of ’s was scrubbed. Launch teams will attempt to launch on Sunday morning. Get real-time updates: https://t.co/9uczz8fdI8 pic.twitter.com/6GyCioopfa
— NASA (@NASA)ಇನ್ನು ಪಾರ್ಕರ್ ಪ್ರೋಬ್ ನೌಕೆಯನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಭಾನುವಾರ ಮತ್ತೆ ಉಡಾವಣೆಗೆ ಸಿದ್ಧಪಡಿಸಲಾಗುವುದು ಎಂದು ನಾಸಾದ ಮೂಲಗಳು ತಿಳಿಸಿವೆ.