
ಸಾಹಿತಿ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಅವರು ಶುಕ್ರವಾರ ಲಕ್ನೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು. ಇವರೊಂದಿಗೆ ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಪ್ರೊ.ಪ್ರಧಾನ ಗುರುದತ್ತ ಇದ್ದರು.
ಮೈಸೂರಿನ ಡಾ. ಭೈರಪ್ಪ ಮತ್ತು ಪ್ರೊ. ಪ್ರಧಾನ್ ಗುರುದತ್ತ ,ಅವರು ಸೆಮಿನಾರ್‌ನಲ್ಲಿ ಭಾಗವಹಿಸಲು ಲಕ್ನೋಗೆ ಬಂದಿದ್ದರು ಮತ್ತು ಅವರು ಯೋಗಿ ಆದಿತ್ಯನಾಥ್ ಅವರೊಂದಿಗೆ ಅಪಾಯಿಂಟ್‌ಮೆಂಟ್ ಕೇಳಿದರು. ಡಾ. ಭೈರಪ್ಪ ಮತ್ತು ಯುಪಿ ಸಿಎಂ ಅವರು ಸೌಜನ್ಯಯುತ ಭೇಟಿಯಾಗಿದ್ದು, ಕೆಲವು ವಿಷಯಗಳ ಕುರಿತು ಮಾತುಕತೆ ನಡೆಸಿದರು ಎಂದು ವರದಿಗಳು ತಿಳಿಸಿವೆ.
ಡಾ.ಭೈರಪ್ಪ ಮತ್ತು ಪ್ರೊ.ಪ್ರಧಾನ ಗುರುದತ್ತ ಅವರು ಜನವರಿ 22 ರಂದು ಶ್ರೀರಾಮ ಮಂದಿರದ ಶಂಕುಸ್ಥಾಪನೆಗಾಗಿ ಅಯೋಧ್ಯೆಯಲ್ಲಿದ್ದಾರೆ.
ಮೋದಿಯೇ ರಾಮಮಂದಿರ ಉದ್ಘಾಟನೆ ಮಾಡಬೇಕೆಂದು ವಿಧಿಯೇ ನಿರ್ಧಾರ ಮಾಡಿದೆ: ಎಲ್‌ಕೆ ಆಡ್ವಾಣಿ
ಕಟ್ಟಾ ಹಿಂದೂವಾದಿಯಾದ ಎಸ್ ಎಲ್ ಭೈರಪ್ಪನವರು ಈ ಹಿಂದೆ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನದಲ್ಲೂ ಭಾಗವಹಿಸಿದ್ದರು. ಅಲ್ಲದೆ, ಹಲವಾರು ಬಾರಿ ರಾಮನ ಕುರಿತಾಗಿ ಭಾಷಣಗಳಲ್ಲಿ ಪ್ರಸ್ತಾಪ ಮಾಡಿರುವ ಅವರು, 'ರಾಮ ಆದರ್ಶ ವ್ಯಕ್ತಿ, ಆತ ಎಂದಿಗೂ ಹಿಂಸೆಯ ಮಾರ್ಗವನ್ನು ಅನುಸರಿಸುತ್ತಿರಲಿಲ್ಲ ' ಎಂದಿದ್ದಾರೆ. ಇದಲ್ಲದೆ, ತಮ್ಮ 'ಆವರಣ' ಕಾದಂಬರಿಯಲ್ಲಿ ದೇವಾಲಗಳ ಕೆಡಗಿ ಮಸೀದಿಗಳನ್ನು ಕಟ್ಟಿದ ಐತಿಹಾಸಿಕ ವಿಷಯವನ್ನೇ ಕತೆಯಾಗಿಸಿದ್ದರು.
ಹಾಸನ (ಜ.12): ರಾಮ ಮಂದಿರ ಎಂಬುದು ಭಾರತದ ಕೋಟ್ಯಂತರ ಮಂದಿಯ ಭಾವನಾತ್ಮಕ ಸಂಬಂಧ. ಅದರಲ್ಲಿ ರಾಜಕಾರಣ ಮಾಡುತ್ತೇನೆ ಎನ್ನುವುದು ಮೂರ್ಖತನವಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ‘ರಾಮಮಂದಿರ ನಿರ್ಮಾಣವಾಗುತ್ತಿದೆ. ಪ್ರಧಾನ ಮಂತ್ರಿ ಆಹ್ವಾನ ಮಾಡಿದ್ದಾರೆ. ಖಂಡಿತವಾಗಿಯೂ ನಾನಂತೂ ಹೋಗುತ್ತೇನೆ. ಕಾಂಗ್ರೆಸ್ ನಿರ್ಣಯ ಅವರ ಪಕ್ಷಕ್ಕೆ ಬಿಟ್ಟದ್ದು. ಅವರ ನಿರ್ಣಯ ಯಾವ ರೀತಿ ಇಂಪ್ಯಾಕ್ಟ್ ಆಗುತ್ತದೆ ಅಂತ ೨೦೨೪ ರ ಚುನಾವಣೆಯಲ್ಲಿ ನೋಡಬೇಕು’ ಎಂದು ಹೇಳಿದರು.
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ದಿನ ಮದ್ಯ ಮಾರಾಟ ನಿಷೇಧ ಘೋಷಿಸಿದ ರಾಜ್ಯಗಳು!
ಮಂತ್ರಾಕ್ಷತೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿ, ‘ಅದು ಅವರವರ ಅನಿಸಿಕೆ. ರಾಮ ಮಂದಿರ ನಿರ್ಮಾಣಕ್ಕೆ ನಾನು ಸಹಕಾರ ಕೊಡ್ತೀನಿ ಅಂತ ಅವರೇ ಹೇಳಿದ್ದರು. ಕೇಂದ್ರದ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ, ರಾಜ್ಯ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ. ಎರಡು ತಪ್ಪು ಮಾಹಿತಿ ನೀಡುತ್ತಿವೆ’ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.