ಅಣ್ಣಾವ್ರ 89ನೇ ಹುಟ್ಟುಹಬ್ಬದ ಸಂಭ್ರಮ: ನಟ ಸಾರ್ವಭೌಮನ ವರ್ಣಚಿತ್ರ ಪ್ರಕಟಿಸಿ ಗೂಗಲ್ ಗೌರವ

By Suvarna Web Desk  |  First Published Apr 24, 2017, 3:23 AM IST

ಡಾಕ್ಟರ್ ರಾಜ್​ ಕುಮಾರ್ ಜನ್ಮ ದಿನ ಬಂದೇ ಬಿಡ್ತು. ಅಭಿಮಾನಿ ದೇವರುಗಳು ಆಚರಣೆಗೆ ಸಜ್ಜಾಗಿಯೇ ಬಿಟ್ಟರು. ಹೌದು ರಾಜ್ ಜನ್ಮ ದಿನ ಬಂದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ. ರಾಜ್ ಈಗಲೂ ಅಭಿಮಾನಿಗಳಲ್ಲಿ ಎಂದೆಂದೂ ಆಚರಿಸಲ್ಪಡುವ ಉತ್ಸವ ಮೂರ್ತಿ.


ಬೆಂಗಳೂರು(ಎ.24): ಡಾಕ್ಟರ್ ರಾಜ್​ ಕುಮಾರ್ ಜನ್ಮ ದಿನ ಬಂದೇ ಬಿಡ್ತು. ಅಭಿಮಾನಿ ದೇವರುಗಳು ಆಚರಣೆಗೆ ಸಜ್ಜಾಗಿಯೇ ಬಿಟ್ಟರು. ಹೌದು ರಾಜ್ ಜನ್ಮ ದಿನ ಬಂದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ. ರಾಜ್ ಈಗಲೂ ಅಭಿಮಾನಿಗಳಲ್ಲಿ ಎಂದೆಂದೂ ಆಚರಿಸಲ್ಪಡುವ ಉತ್ಸವ ಮೂರ್ತಿ.

ರಾಜಕುಮಾರ ಎಲ್ಲರ ಅಕ್ಕರೆ ನಾಯಕ ನಟ. ನಮ್ಮಣ್ಣನವರು ಅಂತ ಕರೆಯುವ ಅದೆಷ್ಟೋ ಹೆಣ್ಮಕ್ಕಳು ಈಗಲೂ ಇದ್ದಾರೆ. ರಾಜ್ ನಮ್ಮ ದೇವರು ಅನ್ನೋರ ಸಂಖ್ಯೆನೂ ದೊಡ್ಡಿದೆ ಇದೆ ಬಿಡಿ. ಅದರಂತೆ ಕಂಠೀರವ ಸ್ಟುಡಿಯೋ ಸದಾ ರಾಜ್​ ಭಕ್ತರಿಂದ ತುಂಬಿರುತ್ತದೆ. ಪ್ರತಿ ಸಲದಂತೆ ಈ ಬಾರಿಗೆ ಜನಸಾಗರ ಕಂಠೀರವ ಸ್ಟುಡಿಯೋಗೆ ಹರಿದು ಬರಲಿದೆ.

Tap to resize

Latest Videos

ಇನ್ನು ಈ ಬಾರಿ ರಾಜ್ ಹುಟ್ಟು ಹಬ್ಬಕ್ಕೆ ತುಂಬಾ ಗಮನ ಸೆಳೆದಿರೋದು ರಾಜಕುಮಾರ ಚಿತ್ರದ ವಿಚಾರ. ರಾಜ್ ಕುಮಾರ್  ಹುಟ್ಟುಹಬ್ಬಕ್ಕೇನೆ ಚಿತ್ರದ ನಿರ್ಮಾಪಕರು ರಾಜ್ಯದ ಅಷ್ಟೂ ಸಿಂಗಲ್​ ಥಿಯೇಟರ್ ನಲ್ಲಿ ಶೇಕಡ 50 ರಷ್ಟು ರಿಯಾತಿ ದರಲ್ಲಿ ಚಿತ್ರ ಪ್ರದರ್ಶನ ಮಾಡಲಿದ್ದಾರೆ.

ಶಿವರಾಜಕುಮಾರ್ ಅಭಿನಯದ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ಹಾಡು ಕೂಡ ಇದೇ ದಿನ ರಿಲೀಸ್ ಆಗುತ್ತಿವೆ. ಇದರ ಹೊರತಾಗಿ ರಾಜ್ಯ ಸರ್ಕಾರ ರಾಜ್​ ಕುಮಾರ್ ಅವರ 89 ನೇ ಜನ್ಮ ದಿನವನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಗೆ ಆಚರಿಸುತ್ತಿದೆ. ರಾಜ್ ಪುತ್ರರಾದ ಶಿವರಾಜ್ ಕುಮಾರ್,ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲಿದ್ದಾರೆ.

ಇದೇ ಸಂದರ್ಭದಲ್ಲಿ ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಮುಖಪುಟದಲ್ಲಿ ರಾಜ್‌ ಅವರ ವರ್ಣಚಿತ್ರ ಪ್ರಕಟಿಸಿದೆ. ಕನ್ನಡದ ನಟರೊಬ್ಬರ ಛಾಯಾ ಚಿತ್ರವನ್ನು ಗೂಗಲ್ ಪ್ರಕಟಿಸಿರುವುದು ಇದೆ ಮೊದಲು. ಈ ಮೂಲಕ ಗೂಗಲ್ ವರನಟನಿಗೆ ಗೌರವ ಸೂಚಿಸಿದೆ. ಈ ಹಿಂದೆ ಕೆಲವು ಹಿಂದಿ ನಟರ ಫೋಟೋಗಳನ್ನು ಹಾಕಲಾಗಿತ್ತು ಎಂದು ಹೇಳಲಾಗುತ್ತಿದೆ.

click me!