
ನವದೆಹಲಿ (ಡಿ.06): ನಟಿ ಸನ್ನಿ ಲಿಯೋನ್ಳನ್ನು ಸಿನಿಮಾಗಳಲ್ಲಿ ಹಿಂದೂ ದೇವತೆಯ ಪಾತ್ರದಲ್ಲಿ ತೋರಿಸದಂತೆ ಹರಿಯಾಣದ ಬಿಜೆಪಿ ಮುಖಂಡ ಸುರಲ್ ಅಮು ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸನ್ನಿ ಲಿಯೋನ್ ನೆಲೆಸಿದ್ದು ವಿದೇಶದಲ್ಲಿ. ಆಕೆಯನ್ನು ಸಿನಿಮಾಗಳಲ್ಲಿ ಹಿಂದೂ ದೇವತೆಯಾಗಿ ಬಿಂಬಿಸುವುದನ್ನು ನಾವು ಸಹಿಸುವುದು ಸಾಧ್ಯವೇ? ಒಂದು ವೇಳೆ ಸನ್ನಿಯನ್ನು ದೇವತೆಯನ್ನಾಗಿ ತೋರಿಸಿದರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ. ಪದ್ಮಾವತಿ ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ತಲೆ ಕಡಿದವರಿಗೆ 10 ಕೋಟಿ ಬಹುಮಾನ ನೀಡುವುದಾಗಿ ಇತ್ತೀಚೆಗೆ ಸುರಲ್ ಘೋಷಿಸಿದ್ದರು. ಈವರೆಗೆ ಮಾದಕ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ನಟಿ ಸನ್ನಿ ಲಿಯೋನ್ ಹೊಸ ಐತಿಹಾಸಿಕ ತಮಿಳು ಚಿತ್ರವೊಂದರಲ್ಲಿ ವೀರ ರಾಣಿಯಾಗಿ ಮಿಂಚಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ವಿಸಿ ವಾದಿವುದಯನ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಹರಿಯಾಣ ಬಿಜೆಪಿ ಮುಖಂಡ ಸನ್ನಿ ಲಿಯೋನ್ಳನ್ನು ಟಾರ್ಗೆಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.