ಲೋಕಸಭೆ ಚುನಾವಣೆಯೊಂದಿಗೆ ರಾಮಮಂದಿರ ವಿವಾದ ಜೋಡಿಸಲು ಕಾಂಗ್ರೆಸ್ ಯತ್ನ: ಪ್ರಧಾನಿ ಮೋದಿ

By Suvarna Web DeskFirst Published Dec 6, 2017, 4:01 PM IST
Highlights

ರಾಮಮಂದಿರ ಕುರಿತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ರಾಮಮಂದಿರ ಮತ್ತು 2019ರ ಲೋಕಸಭಾ ಚುನಾವಣೆಗಳ ನಡುವೆ ಸಂಬಂಧ ಕಲ್ಪಿಸಲು ಯತ್ನಿಸುತ್ತಿದೆಯೆಂದು ಹೇಳಿದ್ದಾರೆ.

ಧನ್ದೂಕ, ಗುಜರಾತ್: ರಾಮಮಂದಿರ ಕುರಿತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ರಾಮಮಂದಿರ ಮತ್ತು 2019ರ ಲೋಕಸಭಾ ಚುನಾವಣೆಗಳ ನಡುವೆ ಸಂಬಂಧ ಕಲ್ಪಿಸಲು ಯತ್ನಿಸುತ್ತಿದೆಯೆಂದು ಹೇಳಿದ್ದಾರೆ.

ಇಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಾಬರೀ ಮಸೀದಿ ಪರ ವಾದಿಸುತ್ತಿರುವ ಕಾಂಗ್ರೆಸ್ ನಾಯಕ ಹಾಗೂ ವಕೀಲ ಕಪಿಲ್ ಸಿಬಲ್ ವಿರುದ್ಧ ಟೀಕಾ ಪ್ರಹಾರಗೈದಿದ್ದಾರೆ.

ಕಪಿಲ್ ಸಿಬಲ್ ಬಾಬರೀ ಮಸೀದಿ ವಿಚಾರಣೆಯನ್ನು ಲೋಕಸಭಾ ಚುನಾವ ಣೆವರೆಗೆ ಮುಂದೂಡಬಯಸುತ್ತಿದ್ದಾರೆ. 2019ರ ಚುನಾವಣೆಗೂ ರಾಮಮಂದಿರಕ್ಕೂ ಸಂಪರ್ಕ ಕಲ್ಪಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಬಾಬರೀ ಮಸೀದಿ ಧ್ವಂಸಗೊಂಡು ಇಂದಿಗೆ 25 ವರ್ಷಗಳು ಕಳೆದಿವೆ.

 

click me!