
ನವದೆಹಲಿ (ಫೆ.23): ಇತ್ತೀಚಿಗೆ ಚುನಾವಣಾ ರ್ಯಾಲಿಯೊಂದರಲ್ಲಿ ಅಖಿಲೇಶ್ ಯಾದವ್ ಕತ್ತೆಗಳ ಪ್ರಚಾರ ಮಾಡಬೇಡಿ ಎಂದು ಅಮಿತಾಬ್ ಗೆ ಹೇಳುವುದರ ಮೂಲಕ ಮೋದಿಗೆ ವೇವಡಿ ಮಾಡಿದ್ದಕ್ಕೆ ಮೋದಿ ಪ್ರತಿಕ್ರಿಯಿಸಿದ್ದಾರೆ.
ಕತ್ತೆಗಳು ಗುಜರಾತ್ ನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿವೆ. ನಿಷ್ಠೆಗೆ ಇನ್ನೊಂದು ಹೆಸರೇ ಕತ್ತೆಗಳು ಎಂದು ಅಖಿಲೇಶ್ ಗೆ ಉತ್ತರಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ವಾಗ್ದಾಳಿ ನಡೆಸುತ್ತಾ, ಅಖಿಲೇಶ್ ಜೀ, ನೀವು ಯಾರ ಜೊತೆ ಕೈಜೋಡಿಸಿದ್ದೀರೋ ಅವರು ಕಳೆದ ಬಾರಿ ಚುನಾವಣೆಯಲ್ಲಿ ಕತ್ತೆ ಚಿತ್ರವಿರುವ ಸ್ಟಾಂಪ್ ಗಳನ್ನು ಹೊರತಂದಿತ್ತು. ನಿಮ್ಮ ಪಕ್ಷದ ಶಾಸಕರು ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದು ನೀವು ಅವರ ಹೆಸರಿನಲ್ಲಿ ಮತಯಾಚಿಸುತ್ತಿರುವುದು ಹಾಸ್ಯಾಸ್ಪದ. ಅಂತಹ ಸರ್ಕಾರಕ್ಕೆ ಅರ್ಹವಲ್ಲ ಎಂದು ಮೋದಿ ಮಾತಿನ ಬಾಣ ಬಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.