ನೊಬೆಲ್ ಶಾಂತಿ ಪ್ರಶಸ್ತಿ ರೇಸಲ್ಲಿ ಟ್ರಂಪ್!

First Published May 1, 2018, 11:07 AM IST
Highlights

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರನ್ನು ಶಾಂತಿ ಮಾತುಕತೆಗೆ ಒಪ್ಪಿಸಿದ ಹಾಗೂ ದಕ್ಷಿಣ ಕೊರಿಯಾದ ಜೊತೆ 60 ವರ್ಷಗಳ ವೈರತ್ವ ತ್ಯಜಿಸುವಂತೆ ಮಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2018 ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯ ರೇಸ್‌ಗೆ ಪ್ರವೇಶಿಸಿದ್ದಾರೆ.

ವಾಷಿಂಗ್ಟನ್ (ಮೇ. 01): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರನ್ನು ಶಾಂತಿ ಮಾತುಕತೆಗೆ ಒಪ್ಪಿಸಿದ ಹಾಗೂ ದಕ್ಷಿಣ ಕೊರಿಯಾದ ಜೊತೆ 60 ವರ್ಷಗಳ ವೈರತ್ವ ತ್ಯಜಿಸುವಂತೆ ಮಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2018 ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯ ರೇಸ್‌ಗೆ ಪ್ರವೇಶಿಸಿದ್ದಾರೆ.

ಈ ವರ್ಷದ ನೊಬೆಲ್ ಪ್ರಶಸ್ತಿಗೆ 329 ಜನರ ಸಂಭವನೀಯ ಪಟ್ಟಿ ತಯಾರಿಸಲಾಗಿದೆ. ಅದರಲ್ಲಿ ಟ್ರಂಪ್, ಕಿಮ್ ಜಾಂಗ್ ಉನ್ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಕೂಡ
ಸೇರಿದ್ದಾರೆ. ಇನ್ನು, ಶನಿವಾರ ಅಮೆರಿಕದ ಮಿಶಿಗನ್‌ನಲ್ಲಿ ರ್ಯಾಲಿಯೊಂದರಲ್ಲಿ ಟ್ರಂಪ್ ಕೊರಿಯಾದ ವಿಷಯ ಪ್ರಸ್ತಾಪಿಸಿದರು. ಆಗ ಜನರು ನೊಬೆಲ್ ನೊಬೆಲ್ ಎಂದು ಕೂಗಿದರು. ಆಗ ನಕ್ಕ ಟ್ರಂಪ್ ,‘ಬಹಳ ಚೆನ್ನಾಗಿದೆ. ಥ್ಯಾಂಕ್ಯೂ. ನೊಬೆಲ್’ ಎಂದರು.

ಈ ಮಧ್ಯೆ, ದಕ್ಷಿಣ ಕೊರಿಯಾದ ಅಧ್ಯಕ್ಷ ಮೂಜ್ ಜೇ ಅವರು ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದಿದ್ದಾರೆ. ಟ್ರಂಪ್‌ಗೆ ಶಾಂತಿ ನೊಬೆಲ್ ದೊರೆತರೆ ಈ ಪ್ರಶಸ್ತಿ ಪುರಸ್ಕೃತರಾದ  ಅಮೆರಿಕದ 5 ನೇ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.  
 

click me!