ಅಮೆರಿಕ ಧ್ವಜದ ಚಿತ್ರವನ್ನೇ ತಪ್ಪಾಗಿ ಬರೆದ ಟ್ರಂಪ್

By Web DeskFirst Published Aug 28, 2018, 12:13 PM IST
Highlights

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಧ್ವಜವನ್ನೇ ತಪ್ಪಾಗಿ ಬಿಡಿಸಿದ ಪ್ರಸಂಗವೊಂದು ನಡೆದಿದೆ. ಇದರಿಂದ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. 

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ಧ್ವಜದ ಚಿತ್ರ ತಪ್ಪಾಗಿ ಬರೆದು ಟೀಕೆಗೆ ಗುರಿಯಾಗಿದ್ದಾರೆ. 

ಓಹಿಯೋದ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದ ಟ್ರಂಪ್, ಅಲ್ಲಿ ಮಕ್ಕಳೊಂದಿಗೆ ಧ್ವಜದ ಚಿತ್ರ ಬಿಡಿಸಲು  ಮುಂದಾಗಿ ಎಡ ವಟ್ಟು ಮಾಡಿಕೊಂಡಿದ್ದಾರೆ. 

ಅಮೆರಿಕ ಧ್ವಜದ ಮೇಲಿನ ಭಾಗದ ಎಡದಲ್ಲಿ ನೀಲಿ ಬಣ್ಣ ಮತ್ತು ನಕ್ಷತ್ರಗಳಿದ್ದು, ಅದರ ಪಕ್ಕ ಹಾಗೂ ಕೆಳಗೆ ಕೆಂಪು-ಬಿಳಿಯ 13 ಪಟ್ಟಿಗಳಿವೆ. ಆದರೆ, ಟ್ರಂಪ್ ಚಿತ್ರದಲ್ಲಿ ಕೆಂಪು-ಬಿಳಿ ನಡುವೆ ನೀಲಿ ಬಣ್ಣ ಚಿತ್ರಿಸಿದ್ದು, ಅದರ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

click me!