100 ಜನರಿಗೆ ಹಾವು ಕಡಿತ : ರಾಜ್ಯ ಸರ್ಕಾರದಿಂದ ಸರ್ಪ ಶಾಂತಿ

By Web DeskFirst Published Aug 28, 2018, 11:45 AM IST
Highlights

100 ಜನರಿಗೆ ಹಾವು ಕಡಿದ ಹಿನ್ನೆಲೆಯಲ್ಲಿ ರಾಜ್ಯ ಮುಜರಾಯಿ ಇಲಾಖೆ ಆ.29 ರಂದು  ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸರ್ಪ ಶಾಂತಿ ಕೈಗೊಳ್ಳಲು ಮುಂದಾಗಿದೆ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಡಿವಿಸೀಮಾ ಎಂಬಲ್ಲಿ ಹಾವಿನ ಕಡಿತದ ಘಟನೆ ನಡೆದಿವೆ. 

ಹೈದರಾಬಾದ್: ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಡಿವಿಸೀಮಾ ಎಂಬಲ್ಲಿ ಹಾವಿನ ಕಡಿತಕ್ಕೆ ಇಬ್ಬರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ರಾಜ್ಯ ಮುಜರಾಯಿ ಇಲಾಖೆ ಆ.29 ರಂದು ಮೊಪಿದೇವಿ ಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸರ್ಪ ಶಾಂತಿ ಕೈಗೊಳ್ಳಲು ಮುಂದಾಗಿದೆ. 

ವಿಷ ನಿವಾರಕ ಔಷಧ ನೀಡುವುದರ ಜೊತೆಗೆ ಹಾವಿನ ಕಡಿತದಿಂದ ಹೇಗೆ ಪಾರಾಗಬೇಕು ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗಿದೆ. ಜೊತೆಗೆ ಜನರಲ್ಲಿ ಮಾನಸಿಕ ಭಯ ಹೋಗಲಾಡಿಸುವ ನಿಟ್ಟಿನಿಂದ ಕೃಷ್ಣಾ ಜಿಲ್ಲೆಯ ಅಧಿಕಾರಿಗಳು ಸರ್ಪ ಶಾಂತಿ ಯಜ್ಞ ಮಾಡಿಸಲು ನಿರ್ಧರಿಸಿದ್ದಾರೆ.

click me!