ಈಡಿಯಟ್ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ರೆ ಟ್ರಂಪ್ ಫೊಟೊ

By Web DeskFirst Published Jul 21, 2018, 1:20 PM IST
Highlights

ನೀವು ಗೂಗಲ್ ನಲ್ಲಿ ಈಡಿಯಟ್ ಎಂದು ಸರ್ಚ್ ಮಾಡಿದ್ರೆ ಯಾವ ಚಿತ್ರ ಬರುತ್ತದೆ ಎಂದು ಗಮನಿಸಿದ್ದೀರಾ. ಗೂಗಲ್ ಇಮೇಜ್‌ನಲ್ಲಿ ನೀವು ಈಡಿಯಟ್ ಎಂದು ಸರ್ಚ್ ಮಾಡಿದರೆ, ಟ್ರಂಪ್ ಅವರ ಫೋಟೋಗಳು ತೆರೆದುಕೊಳ್ಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು :  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂಗೋಪ, ಹುಂಬತನ ಎಲ್ಲರಿಗೂ ಗೊತ್ತು. ಹಾಗೆಂದ ಮಾತಕ್ಕೆ ಟ್ರಂಪ್  ರನ್ನು ಈಡಿಯಟ್ (ಮೂರ್ಖ) ಎಂದು ಕರೆಯಬಹುದೇ? ಆದರೆ, ಗೂಗಲ್ ಇಮೇಜ್‌ನಲ್ಲಿ ನೀವು ಈಡಿಯಟ್ ಎಂದು ಸರ್ಚ್ ಮಾಡಿದರೆ, ಟ್ರಂಪ್ ಅವರ ಫೋಟೋಗಳು ತೆರೆದುಕೊಳ್ಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಮುನ್ನ ಗೂಗಲ್, ಪ್ರಧಾನಿ ನರೇಂದ್ರ ಮೋದಿ ಅವರ ವಿಷಯದಲ್ಲೂ ಇದೇರೀತಿಯ ಎಡವಟ್ಟು ಮಾಡಿತ್ತು. 

ಕಳೆದ ಮೇ ತಿಂಗಳಿನಲ್ಲಿ ಫೇಕು ಎಂದು ಗೂಗಲ್ ಸರ್ಚ್ ಮಾಡಿದರೆ ಮೋದಿ ಫೋಟೋ ತೋರಿಸುತ್ತಿತ್ತು.  ಇಂಟರ್‌ನೆಟ್ ಹ್ಯಾಕರ್‌ಗಳು ಗೂಗಲ್‌ನ ಕ್ರಮಾವಳಿಯನ್ನು ತಿರುಚಿ ಈಡಿಯಟ್ ಎಂಬ ಶಬ್ದಕ್ಕೆ ಟ್ರಂಪ್ ಹೆಸರನ್ನು ಸೇರಿಸಿದ್ದಎಂದು ಸಿಎನ್ ಇಟಿ  ವಾಹಿನಿ ವರದಿ ಮಾಡಿದೆ.

click me!