ಮನೇಕಾ ಹೇಳಿಕೆ ಖಂಡಿಸಿ ಕೇರಳದಲ್ಲಿ ನಾಯಿಗಳ ಮಾರಣಹೋಮ

By Internet DeskFirst Published Sep 27, 2016, 4:37 PM IST
Highlights

ನವದೆಹಲಿ (ಸೆ.27):  ಕೇರಳದಲ್ಲಿ ಶ್ವಾನಗಳ ಹತ್ಯೆ ವಿರೋಧಿಸಿ ಕೇಂದ್ರ ಸಚಿವೆ ಮನೇಕಾ ಗಾಂಧಿ ನೀಡಿದ್ದ ಹೇಳಿಕೆ ಖಂಡಿಸಿ ಕೇರಳದ ಕೊಟ್ಟಾಯಂ ಕಾಂಗ್ರೆಸ್‌ ಯುವ ವಿಭಾಗ (ಮಾಣಿ) ಕಾರ್ಯಕರ್ತರು ಸೋಮವಾರ ಹತ್ತು ನಾಯಿಗಳನ್ನು ಹತ್ಯೆಗೈದಿದ್ದು, ಅವುಗಳ ಶವಗಳನ್ನು ಕಂಬಕ್ಕೆ

ಕಟ್ಟಿಮೆರವಣಿಗೆ ನಡೆಸಿದ್ದಾರೆ. ಶ್ವಾನಗಳ ಹಾವಳಿ ಹೆಚ್ಚಾಗಿ ಇತ್ತೀಚೆಗೆ ಹಲವರು ಮೃತಪಟ್ಟಬೆನ್ನಲ್ಲೇ ನಾಯಿಗಳ ಮಾರಣಹೋಮ ನಡೆದಿದೆ ಎಂದು ‘ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ನಾಯಿಗಳ ಹತ್ಯೆಯನ್ನು ಟೀಕಿಸಿದ್ದ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರಿಗೆ ನಾಯಿಗಳ ಶವವನ್ನು ಪಾರ್ಸೆಲ್‌ ಮಾಡುವಂತೆ ಅಂಚೆ ಇಲಾಖೆಯ ಮುಂದೆ ಶವಗಳನ್ನಿಟ್ಟು ಧರಣಿ ನಡೆಸಿ ಆಗ್ರಹಿಸಿದ್ದಾರೆ ಹಾಗೂ ಕಾರ್ಯಕರ್ತರು ಮನೇಕಾ ಅವರಿಗೆ ಪತ್ರ ಬರೆದು ಈ ವಿಷಯದ ಕುರಿತು ತಮ್ಮ

ನಿಲುವನ್ನು ಬದಲಿಸಬೇಕೆಂದು ತಿಳಿಸಿದ್ದಾರೆ. ‘ಭೀಕರವಾದ ಅಪಾಯಕಾರಿ ನಾಯಿ’ಗಳನ್ನು ಮಾತ್ರ ಹತ್ಯೆಗೈದಿದ್ದೇವೆ ಎಂದು ಯುವ ವಿಭಾಗದ ಅಧ್ಯಕ್ಷ ಶಾಜಿ ಮಂಜಕದಂಬಿಲ್‌ ತಿಳಿಸಿದ್ದಾರೆ. 15 ಮಂದಿಯ ವಿರುದ್ಧ ಕೊಟ್ಟಾಯಂ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!