ತಡರಾತ್ರಿಯ ವರೆಗೆ ಇರಲಿವೆ ಕೌಂಟರ್'ಗಳು

By Internet DeskFirst Published Sep 27, 2016, 4:33 PM IST
Highlights

ನವದೆಹಲಿ(ಸೆ.27): ಕೇಂದ್ರ ಸರ್ಕಾರ ಘೋಷಣೆ ಮಾಡಿದ ಸ್ವಯಂಪ್ರೇರಿತರಾಗಿ ಕಪ್ಪುಹಣ ಘೋಷಣೆ (ಐಡಿಎಸ್‌)ಮಾಡುವವರ ಅನುಕೂಲಕ್ಕಾಗಿ ಸೆ.30ರ ವರೆಗೆ ಕೌಂಟರ್‌ಗಳು ಮಧ್ಯರಾತ್ರಿಯ ವರೆಗೂ ಕಾರ್ಯ ನಿರ್ವಹಿಸಲಿವೆ.

ಈ ಬಗ್ಗೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ವಿಶೇಷ ಆದಾಯ ತೆರಿಗೆ ಆಯುಕ್ತರು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವಂತೆ ಆದೇಶ ನೀಡಿದೆ. ಆನ್‌ಲೈನ್‌ ಅಥವಾ ಖುದ್ದಾಗಿ ದಾಖಲೆಗಳನ್ನು ಸಲ್ಲಿಸಲು ಅವಕಾಶ ಉಂಟು. ಘೋಷಣೆ ಮಾಡುವವರಿಗೆ ಶೇ.45ರಷ್ಟುತೆರಿಗೆ ಮತ್ತು ದಂಡ ವಿಧಿಸಲಾಗುತ್ತದೆ.

ಅದನ್ನು 2017ರ ಸೆಪ್ಟೆಂಬರ್‌ ವರೆಗೆ ಮೂರು ಕಂತುಗಳಲ್ಲಿ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಈ ಯೋಜನೆ ನಾಲ್ಕು ತಿಂಗಳ ಹಿಂದೆ ಘೋಷಣೆಯಾಗಿತ್ತು.

click me!