'ಹಿಂದೂಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದೇ?'

First Published Jun 16, 2018, 7:21 PM IST
Highlights

ಹಿಂದೂಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದೇ?

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನೆ

ಕೋಲ್ಕತ್ತಾದಲ್ಲಿ ನಡೆದ ರಂಜಾನ್ ಕಾರ್ಯಕ್ರಮದಲ್ಲಿ ಭಾಗಿ

ಕೋಲ್ಕತ್ತಾ(ಜೂ.16): ತಮ್ಮ ವಿರುದ್ಧ ಅತಿಯಾದ ಮುಸ್ಲಿಂ ತುಷ್ಟೀಕರಣ ಆರೋಪ ಮಾಡುತ್ತಿರುವವರು ಹಿಂದೂಗಳಿಗೂ ಸ್ನೇಹಿತರಲ್ಲ, ಮುಸ್ಲಿಮರಿಗೂ ಸ್ನೇಹಿತರಲ್ಲ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. 

'ಕೆಲವರು ನನ್ನ ವಿರುದ್ಧ ಮುಸ್ಲಿಂ ತುಷ್ಟೀಕರಣ ಮಾಡುತ್ತಿರುವ ಆರೋಪ ಮಾಡುತ್ತಾರೆ. ಹಿಂದೂಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದು ಎಂದು ಅರ್ಥವೇ ಎಂಧು ನಾನು ಅವರನ್ನು ಕೇಳುತ್ತೇನೆ, ನಾನು ಎಲ್ಲಾ ಧರ್ಮ, ಸಮುದಾಯಗಳನ್ನೂ ಪ್ರೀತಿಸುತ್ತೇನೆ, ಈ ದೇಶ ಎಲ್ಲರಿಗೂ ಸೇರಿದ್ದು' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಕೋಲ್ಕತ್ತಾದಲ್ಲಿ ನಡೆದ ರಂಜಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಮತಾ, ಹಿಂದೂಗಳನ್ನು ಪ್ರೀತಿಸುವುದು ಎಂದರೆ ಮುಸ್ಲಿಮರನ್ನು ದ್ವೇಷಿಸುವುದು ಎಂಬ ಭಾವನೆ ದೇಶದಲ್ಲಿ ಬೆಳೆಯಲು ಬಿಡುತ್ತಿರುವ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ರಂಜಾನ್ ದಿನದಂದೇ ನಿಗದಿಯಾಗಿದ್ದ ನೀತಿ ಆಯೋಗದ ಸಭೆಯ ದಿನಾಂಕ  ತಮ್ಮ ಪ್ರತಿಭಟನೆಯಿಂದಲೇ ಮುಂದೂಡಿಕೆಯಾಗಿದೆ ಎಂದೂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

 

click me!