ಫಿಫಾ ವಿಶ್ವಕಪ್ ಮೇಲೆ ಐಸಿಸ್ ಕರಿನೆರಳು: ದಾಳಿ ಕುರಿತು ಅಮೆರಿಕ ಹೇಳಿದ್ದೇನು?

First Published Jun 16, 2018, 6:47 PM IST
Highlights

ಫಿಫಾ ವಿಶ್ವಕಪ್ ಮೇಲೆ ಐಸಿಸ್ ಉಗ್ರರ ಕರಿನೆರಳು?

ಪಂದ್ಯಾವಳಿ ವೇಳೆ ದಾಳಿ ನಡೆಸುವ ಸಾಧ್ಯತೆ

ತನ್ನ ಪ್ರಜೆಗಳಿಗೆ ಅಲರ್ಟ್ ಸಂದೇಶ ಕಳುಹಿಸಿದ ಅಮೆರಿಕ

ಸೂಕ್ತ ಬಂದೋಬಸ್ತ್ ಗಾಗಿ ರಷ್ಯಾಗೆ ಮನವಿ

ವಾಷಿಂಗ್ಟನ್(ಜೂ.16): ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಪಂದ್ಯಕ್ಕೆ ಐಸಿಸ್ ಉಗ್ರರ ಕರಿನೆರಳು ಬಿದ್ದಿರುವ ಅನುಮಾನ ಕಾಡುತ್ತಿದೆ. ಫಿಫಾ ವಿಶ್ವಕಪ್ ಸಂದರ್ಭದಲ್ಲಿ ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಈ ಕುರಿತು ಸದ್ಯ ರಷ್ಯಾದಲ್ಲಿರುವ ಅಮೆರಿಕನ್ ನಾಗರಿಕರಿಗೆ ಅಲರ್ಟ್ ಸಂದೇಶ ಕಳುಹಿಸಿರುವ ಅಮೆರಿಕ, ಐಸಿಸ್ ದಾಳಿಯ ಸ್ಪಷ್ಟ ಬೆದರಿಕೆಯ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ದೊಡ್ಡ ಮಟ್ಟದ ಅಂತರಾಷ್ಟ್ರೀಯ ಕಾರ್ಯಕ್ರಮವಾಗಿರುವ ಫಿಫಾ ವಿಶ್ವಕಪ್ ಸಂದರ್ಭದಲ್ಲಿ ಐಸಿಸ್ ದಾಳಿ ನಡೆಸುವ ಸಾಧ್ಯತೆ ಇದ್ದು, ಈ ಕುರಿತು ಎಚ್ಚರದಿಂದ ಇರುವಂತೆ ತನ್ನ ನಾಗರಿಕೆರಿಗೆ ಅಮೆರಿಕ ಸೂಚನೆ ನೀಡಿದೆ.

ಫಿಫಾ ವಿಶ್ವಕಪ್ ಐಸಿಸ್ ಉಗ್ರರನ್ನು ಆಕರ್ಷಿಸುತ್ತಿದೆ. ಕಾರಣ ಜಗತ್ತಿನ ಎಲ್ಲ ದೇಶಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಐಸಿಸ್ ಗೆ ದಾಳಿ ಮಾಡಲು ಉತ್ತೇಜನ ನೀಡುತ್ತಿದೆ ಎಂದು ಅಮೆರಿಕ ಎಚ್ಚರಿಸಿದೆ. ರಷ್ಯಾಗೆ ಹೋಗ ಬಯಸುವ ಪ್ರವಾಸಿಗರು ಸಂಭಾವ್ಯ ದಾಳಿಯ ಕುರಿತು ಎಚ್ಚರದಿಂದ ಇರಬೇಕು ಎಂದು ಅಮೆರಿಕ ತಿಳಿಸಿದೆ.

ಫುಟ್ಬಾಲ್ ಕ್ರೀಡಾಂಗಣ. ಅಭಿಮಾನಿಗಳು ವಿಜಯೋತ್ಸವ ಆಚರಿಸುವ ಪ್ರದೇಶಗಳು, ಪ್ರವಾಸೋದ್ಯಮ ಸ್ಥಳಗಳು. ಸಾರಿಗೆ ನಿಲ್ದಾಣಗಳು ಮತ್ತಿತರ ಸಾರ್ವಜನಿಕ ಸ್ಥಳಗಳು ಉಗ್ರರ ಹಿಟ್ ಲಿಸ್ಟ್ ನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಇಂತಹ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ನಿಯೋಜಿಸುವಂತೆ ಅಮೆರಿಕ ಸರ್ಕಾರ ರಷ್ಯಾಗೆ ಮನವಿ ಮಾಢಿದೆ.

click me!