ಔಷಧ ವ್ಯಾಪಾರಿಗಳಿಗೆ ತಟ್ಟಲಿದೆಯೇ ಜಿಎಸ್'ಟಿ ಪ್ರಭಾವ?

Published : Jun 27, 2017, 09:46 PM ISTUpdated : Apr 11, 2018, 12:44 PM IST
ಔಷಧ ವ್ಯಾಪಾರಿಗಳಿಗೆ ತಟ್ಟಲಿದೆಯೇ ಜಿಎಸ್'ಟಿ ಪ್ರಭಾವ?

ಸಾರಾಂಶ

ಜುಲೈ 1 ರಿಂದ ಜಿಎಸ್‌ಟಿ ಜಾರಿಗೆ ದೇಶ ಮುಂದಾಗುತ್ತಿದ್ದು, ಇದು ಯಾವ್ಯಾವುದರ ಮೇಲೆ ಯಾವ ರೀತಿಯ ಪರಿಣಾಮ ಬೀರಬಲ್ಲದು ಎಂಬ ಸ್ಪಷ್ಟ ಚಿತ್ರಣವಿನ್ನು ಸಿಕ್ಕಿಲ್ಲ.  ಈಗಾಗಲೇ  ಆನ್‌ಲೈನ್ ಮಾರಾಟದಿಂದ ನಷ್ಟ ಅನುಭವಿಸುತ್ತಿರುವ ಔಷದ ವ್ಯಾಪಾರಿಗಳಿಗೂ  ಜಿಎಸ್‌ಟಿ ಬಗ್ಗೆ ಗೊಂದಲವಿದ್ದು ಔಷಧ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಳಿಗೆಗಳಲ್ಲಿ ಔಷಧಗಳ ದಾಸ್ತಾನು ಕಡಿಮೆಯಾಗಿದ್ದು ಇದರಿಂದ ಔಷಧ ಕೊರತೆ ಎದುರಾಗಲಿದೆ.

ಬೆಂಗಳೂರು (ಜೂ.27): ಜುಲೈ 1 ರಿಂದ ಜಿಎಸ್‌ಟಿ ಜಾರಿಗೆ ದೇಶ ಮುಂದಾಗುತ್ತಿದ್ದು, ಇದು ಯಾವ್ಯಾವುದರ ಮೇಲೆ ಯಾವ ರೀತಿಯ ಪರಿಣಾಮ ಬೀರಬಲ್ಲದು ಎಂಬ ಸ್ಪಷ್ಟ ಚಿತ್ರಣವಿನ್ನು ಸಿಕ್ಕಿಲ್ಲ.  ಈಗಾಗಲೇ  ಆನ್‌ಲೈನ್ ಮಾರಾಟದಿಂದ ನಷ್ಟ ಅನುಭವಿಸುತ್ತಿರುವ ಔಷದ ವ್ಯಾಪಾರಿಗಳಿಗೂ  ಜಿಎಸ್‌ಟಿ ಬಗ್ಗೆ ಗೊಂದಲವಿದ್ದು ಔಷಧ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಳಿಗೆಗಳಲ್ಲಿ ಔಷಧಗಳ ದಾಸ್ತಾನು ಕಡಿಮೆಯಾಗಿದ್ದು ಇದರಿಂದ ಔಷಧ ಕೊರತೆ ಎದುರಾಗಲಿದೆ.

ಈ ವರೆಗೆ ಔಷಧದ ಮೇಲಿನ ತೆರಿಗೆ ಪ್ರಮಾಣ ಶೇ.9 ರಷ್ಟಿದ್ದು ಜಿಎಸ್‌ಟಿ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಈ ಪ್ರಮಾಣ ಶೇ‌.12 ಕ್ಕೆ ಏರಲಿದೆ. ಅಲ್ಲದೆ ಗರಿಷ್ಟ ಮಾರಾಟ ದರವು ಶೇ.2.5 ಹೆಚ್ಚಾಗಲಿದೆ. ವ್ಯಾಪಾರಿಗಳು ದಾಸ್ತಾನು ಇಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಳೆಯ ಔಷಧ ಇಟ್ಟುಕೊಂಡರೆ ಹಳೆ ಬೆಲೆಗೆ ಔಷಧ ಮಾರಬೇಕಾ ಅಥವಾ ಜಿಎಸ್​ಟಿ ಬೆಲೆಗೆ ಮಾರಬೇಕಾ ಎನ್ನುವ ಗೊಂದಲ ಸೃಷ್ಟಿಯಾಗಿದೆ.  ಮಾರಾಟಗಾರರಿಗೆ ನಷ್ಟವಾಗುವುದೇ ಹೊರತು ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ.

ದೇಶಾದ್ಯಂತ ಕಳೆದ 75 ದಿನಗಳಿಂದ  ವ್ಯಾಪಾರಿಗಳು ಔಷಧ ಖರೀದಿ ಪ್ರಮಾಣವನ್ನು ತಗ್ಗಿಸಿದ್ದು ಇದು ಕೆಲವು ಕಡೆ ಗ್ರಾಹಕರ ಮೇಲೆ ಪರಿಣಾಮ ಬೀರಿದೆ.  ಈಗಾಗಲೆ‌ ಔಷಧ ಮಳಿಗೆಗಳಲ್ಲಿ ಶೇ.50 ರಷ್ಟು ಔಷಧ ಕೊರತೆ ಕಾಣುತ್ತಿದೆ. ಜಿಎಸ್‌ಟಿಗೆ ರೂಪಾಂತರಗೊಳ್ಳುವ ಸಮಯವಿದಾಗಲಿದ್ದು ಜುಲೈನಲ್ಲಿ ಔಷಧ ಮಾರಾಟದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ. ಹಳೆಯ ದಾಸ್ತಾನುಗಳುನ್ನು ಗ್ರಾಹಕರಿಗೆ ಅನುಕೂಲವಾಗುವಂತೆ ಮಾರಲಾಗುವುದು. ಗ್ರಾಹಕರು ಈ ಬಗ್ಗೆ  ಚಿಂತಿವಂತಿಲ್ಲ ಎಂದು ಡ್ರಗ್ಸ್​ ಅಸೋಶಿಏಷನ್​ ಆದ್ಯಕ್ಷ ರಘುನಾಥ್ ಹೇಳಿದ್ದಾರೆ.

ಈಗಾಗಲೆ ‌ದಾಸ್ತಾನು ಇರುವ ಔಷಧಿಗಳಿಂದ ಉತ್ಪಾದಕರು ಶೇ.2.5 ರಷ್ಟು ನಷ್ಟ ಅನುಭವಿಸಬೇಕಾಗಿದ್ದು ಮಾರಾಟಗಾರರು ಶೇ.1 ರಿಂದ ಶೇ.1.2 ರಷ್ಟು ನಷ್ಟ ಅನುಭವಿಸಲಿದ್ದಾರೆ. ಕೆಲವೇ ಕಲವು ಉತ್ಪಾದಕರು ಮಾರಾಟಗಾರರಿಗೆ ನಷ್ಟ ಭರಿಸುವ ಭರವಸೆಯನ್ನು ನೀಡುತ್ತಿದ್ದು ಈ ಬಗ್ಗೆ ಯಾವುದೆ ಲಿಖಿತ ಸ್ಪಷ್ಟನೆ ಇಲ್ಲ. ಶೀಘ್ರವೇ ಈ ಬಗ್ಗೆ  ಸರ್ಕಾರ ನಿರ್ಧಾರ ಕೈಗೊಂಡರೆ ಔಷಧ ಮಾರಾಟಗಾರರಿಗೂ ದಾಸ್ತನು ಮಾರುವುದರಲ್ಲಿ ಅನುಕೂಲವಾಗುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!