ಮೈಸೂರು (ಜೂ.27): ತನ್ನನ್ನು ಕಂಡ ನಾಯಿ ಬೊಗಳುತ್ತಿದ್ದರಿಂದ ರೊಚ್ಚಿಗೆದ್ದ ಯುವಕ ಅದನ್ನು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಮೈಸೂರಿನ ಎನ್.ಆರ್ ಮೊಹಲ್ಲಾದ ಎಜೆ ಬ್ಲಾಕ್‌ನಲ್ಲಿ ಭಾನುವಾರ ಸಂಜೆ ನಡೆದಿದೆ.
ಆರೋಕ್ಯ ಮೇರಿ ಎಂಬವವರ ಸಾಕುನಾಯಿಗೆ ಪಕ್ಕದ ಮನೆಯ ನಿವಾಸಿ ಜುಲ್ಫಿಕರ್ (26) ಎಂಬಾತ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿರುವ ನಾಯಿಗೆ ಖಾಸಗಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಜುಲ್ಫಿಕರ್ ವಿರುದ್ಧ ಆರೋಕ್ಯಮೇರಿ ದೂರು ನೀಡಿದ್ದು, ಈ ಸಂಬಂಧ ಎನ್.ಆರ್. ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
-ಸಾಂದರ್ಭಿಕ ಚಿತ್ರ