
ಲಖನೌ(ಜೂ.27): ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರ ಇಂದು 100 ದಿನ ಪೂರೈಸಿದೆ. ಮುಖ್ಯಮಂತ್ರಿಯಾಗಿ 100 ದಿನ ಪೂರೈಸಿರುವ ಯೋಗಿ ಆದಿತ್ಯನಾಥ್ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಸರ್ಕಾರದಲ್ಲಿ ಎಲ್ಲರಿಗೂ ಸಮಾನವಾಗಿ ಕಾಣಲಾಗುತ್ತಿದ್ದು ಯಾವುದೇ ವಲಯಕ್ಕೂ ತಾರತಮ್ಯ ಮಾಡಿಲ್ಲ ಅಂತಾ ಹೇಳಿದ್ದಾರೆ. ಇನ್ನೂ ಇದೇ ವೇಳೆ ಎಲ್ಲರಿಗೂ ಉದ್ಯೋಗಾವಕಾಶವನ್ನು ಒದಗಿಸುವುದು ತಮ್ಮ ಸರ್ಕಾರದ ಮುಖ್ಯ ಉದ್ದೇಶ ಅಂತಾನೂ ತಿಳಿಸಿದ್ದಾರೆ. ಅಲ್ಲದೆ ರೈತರ ಹಿತಕ್ಕಾಗಿಯೂ ಇನ್ನಷ್ಟು ಶ್ರಮಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. 100 ದಿನದ ಆಡಳಿತದಲ್ಲಿ ಪೊಲೀಸ್ ವ್ಯವಸ್ಥೆಗೆ ಹೊಸ ಕಾಯಕಲ್ಪ. ಶಿಸ್ತಿನ ಅಧಿಕಾರಿಗಳಿಗೆ ಅಭಯ ಹಸ್ತ. ತಪ್ಪೆಸಗುವ ಅಧಿಕಾರಿಗಳಿಗೆ ಎಚ್ಚರಿಕೆ. ಹೆಣ್ಣುಮಕ್ಕಳ ರಕ್ಷಣೆಗೆ ಆ್ಯಂಟಿ ರೋಮಿಯೋ ಸ್ಕ್ವಾಡ್ ಎಂಬ ನೈತಿಕ ಪೊಲೀಸ್ ತಂಡ ರಚನೆ ಹೀಗೆ ಹತ್ತು ಹಲವು ಯೋಗಿ ಸಾಧನೆಯ ಪಟ್ಟಿಯಲ್ಲಿ ಬರುತ್ತವೆ.
ಯೋಗಿ ‘100' ದಿನದ ಸಾಧನೆಗಳೇನು?
*ರೈತರ ಸಾಲ ಮನ್ನಾ, ಸರ್ಕಾರಿ ರಜಾ ದಿನಗಳ ಕಡಿತ
*ಬೇಜವಾಬ್ದಾರಿ ಅಧಿಕಾರಿಗಳಿಗೆ ಕೊಕ್, ದಕ್ಷರಿಗೆ ಮಣೆ
*ಬಡವರಿಗೆ ಉಚಿತ ವಿದ್ಯುತ್ ಸರಬರಾಜು
*ಲ್ಯಾಂಡ್ ಮಾಫಿಯಾ ವಿರುದ್ಧ ಟಾಸ್ಕ್ ಫೋರ್ಸ್
*ಹೆಣ್ಣುಮಕ್ಕಳ ರಕ್ಷಣೆಗೆ ಆ್ಯಂಟಿ ರೋಮಿಯೋ ಸ್ಕ್ವಾಡ್
*ಆಯಕಟ್ಟಿನ ಜಾಗದಲ್ಲಿ ಶಿಸ್ತಿನ ಅಧಿಕಾರಿಗಳ ನಿಯೋಜನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.