ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ!

By Web Desk  |  First Published Aug 8, 2019, 7:27 AM IST

ಎದೆನೋವು ಎಂದು ಆಸ್ಪತ್ರೆಗೆ ದಾಖಲಾದ ಬಿಜೆಪಿಯ ಹಿರಿಯ ನಾಯಕಿ| ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ| 


ನವದೆಹಲಿ[ಆ.08]: ಎದೆನೋವು ಎಂದು ಆಸ್ಪತ್ರೆಗೆ ದಾಖಲಾದ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರನ್ನು ಉಳಿಸಿಕೊಳ್ಳಲು ಮಂಗಳವಾರ ರಾತ್ರಿ 70 ನಿಮಿಷಗಳ ಕಾಲ ಹರಸಾಹಸ ನಡೆಸಿದರು. ಆದರೆ ವಿಧಿ ಮುಂದೆ ಅವರ ಯತ್ನಕ್ಕೆ ಫಲ ಸಿಗಲೇ ಇಲ್ಲ.

ದೆಹಲಿಯ ಜನಪಥ್‌ ರಸ್ತೆಯ ನಿವಾಸದಲ್ಲಿರುವ ಧವನ್‌ ದೀಪ್‌ ಅಪಾರ್ಟ್‌ಮೆಂಟ್‌ನಲ್ಲಿನ ಬಾಡಿಗೆ ಫ್ಲ್ಯಾಟ್‌ಗೆ ಕಳೆದ ತಿಂಗಳಷ್ಟೇ ವಾಸ್ತವ್ಯ ಬದಲಿಸಿದ್ದ ಸುಷ್ಮಾ ಅವರಿಗೆ ರಾತ್ರಿ 9ರ ವೇಳೆಗೆ ಅಸೌಖ್ಯ ಹಾಗೂ ಎದೆನೋವು ಕಾಣಿಸಿಕೊಂಡಿತು. ರಾತ್ರಿ 9.30ರ ವೇಳೆಗೆ ಅವರನ್ನು ಏಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು.

Latest Videos

undefined

ಗಂಭೀರ ಪರಿಸ್ಥಿತಿಯಿಂದ ಸುಷ್ಮಾ ಅವರನ್ನು ಹೊರಕ್ಕೆ ತರಲು ತುರ್ತು ನಿಗಾ ಘಟಕದಲ್ಲಿ ವೈದ್ಯರ ತಂಡ 70 ನಿಮಿಷಗಳಿಗೂ ಹೆಚ್ಚು ಕಾಲ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಡೆಸಿತು. ಆದರೆ ರಾತ್ರಿ 10.50ಕ್ಕೆ ಸುಷ್ಮಾ ಅವರು ಕೊನೆಯುಸಿರೆಳೆಯುವುದರೊಂದಿಗೆ ಅವರ ಎಲ್ಲ ಪ್ರಯತ್ನಗಳಿಗೂ ತೆರೆ ಬಿತ್ತು. ರಾತ್ರಿ 12.15ಕ್ಕೆ ಸುಷ್ಮಾ ಅವರ ದೇಹವನ್ನು ಅವರ ನಿವಾಸಕ್ಕೆ ತರಲಾಯಿತು.

ಸುಷ್ಮಾ ನಿಧನದೊಂದಿಗೆ ಒಂದು ವರ್ಷದ ಅವಧಿಯಲ್ಲಿ ದೆಹಲಿ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡಂತಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಮದನ್‌ ಲಾಲ್‌ ಖುರಾನ, ಜುಲೈನಲ್ಲಿ ಶೀಲಾ ದೀಕ್ಷಿತ್‌ ನಿಧನರಾಗಿದ್ದರು.

click me!